ಬೆಂಗಳೂರು: ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ವಿವಾದದ ಬಗ್ಗೆ ಈಗಾಗಲೇ ಸಾಹಿತಿಗಳು, ಕಾಂಗ್ರೆಸ್ ಸೇರಿದಂತೆ ಅನೇಕರು ಪ್ರತಿಭಟನೆ ನಡೆಸಿದ್ದರು. ಈಗ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಸಿಡಿದೆದ್ದಿದ್ದಾರೆ. ಜೂನ್ 18ರಂದು ಜಾಥಾ ನಡೆಸಲಿದ್ದಾರೆ.
ಈ ಸಂಬಂಧ ಕುವೆಂಪು ಹೋರಾಟ ಸಮಿತಿ ಜೂನ್ 18ರಂದು ಕರೆ ನೀಡಲಾಗಿರುವಂತ ಜಾಥಾ ಸಂಬಂಧ ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡ ಅವರನ್ನು ಆಹ್ವಾನಿಸಿದ್ದಾರೆ. ಪಠ್ಯ ಪುಸ್ತಕ ಪರಿಷ್ಕರಣೆ ಹಿಂಪಡೆಯಬೇಕು ಎನ್ನುವ ಹೋರಾಟಕ್ಕೆ ಬೆಂಬಲಿಸುವಂತೆ ಮನವಿ ಮಾಡಿದರು. ಕುವೆಂಪು ಹೋರಾಟ ಸಮಿತಿಯ ಕರೆಗೆ ಒಗೊಟ್ಟಿರುವಂತ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು, ರಾಜ್ಯಾದ್ಯಂತ ಜೂನ್ 18ರಂದು ನಡೆಸಲಿರುವಂತ ಜಾಥಾದಲ್ಲಿ ಭಾಗಿಯಾಗಲಿದ್ದಾರೆ. ಈ ಮೂಲಕ ಬಸವೇಶ್ವರ, ಅಂಬೇಡ್ಕರ್ ಸೇರಿದಂತೆ ಇತರರ ಬಗ್ಗೆ ಮಾಡಿದ ಅವಮಾನವನ್ನು ಖಂಡಿಸಲಿದ್ದಾರೆ. ಅಲ್ಲದೇ ಪರಿಷ್ಕೃತ ಪಠ್ಯವನ್ನು ವಾಪಾಸ್ ಪಡೆಯುವಂತೆಯೂ ಒತ್ತಾಯಿಸಲಿದ್ದಾರೆ.
PublicNext
15/06/2022 10:19 am