ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರವಾಸಿಗರು ದೇವಸ್ಥಾನ ನೋಡೋದು ಬಿಟ್ಟು ನಿಮ್ಮ ಹೋಮ್ ಸ್ಟೇ ನೋಡಬೇಕೋ !

ಗಂಗಾವತಿ: ಅಂಜನಾದ್ರಿ ಬೆಟ್ಟ ಈಗ ಪ್ರವಾಸಿ ತಾಣವೇ ಆಗಿದೆ. ಇಲ್ಲಿ ದಿನವೂ ಸಾವಿರಾರು ಭಕ್ತರು ಬರುತ್ತಾರೆ. ಒಂದು ವೇಳೆ ಇದರ ಸುತ್ತ-ಮುತ್ತಲ ಪ್ರದೇಶದಲ್ಲಿ ಹೋಮ್ ಸ್ಟೇಗೆ ಅನುಮತಿ ಕೊಟ್ಟರೇ, ಕ್ಷೇತ್ರ ಕಲುಷಿಗೊಳ್ಳುತ್ತದೆ ಎಂದು ಪ್ರವಾಸೋದ್ಯಮ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ.

ಅಂಜನಾದ್ರಿ ಸುತ್ತ ಮುತ್ತಲೂ ಹೋಮ್ ಸ್ಟೇ ಮಾಡ್ತೀವಿ ಎಂದು ರೆಸಾರ್ಟ್ ಮಾಲೀಕರು ಸಚಿವರಿಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿಯೇ ಸಚಿವ ಆನಂದ್ ಸಿಂಗ್ ಈಗ ಈ ಹೇಳಿಕೆ ಕೊಟ್ಟಿದ್ದಾರೆ.

ಪದೇ ಪದೇ ಬಂದು ನೀವು ಹೋಮ್ ಸ್ಟೇಗೆ ಅನುಮತಿ ಕೇಳಲೇಬೇಡಿ. ಈ ವಿಚಾರವಾಗಿ ಕಾನೂನು ತೊಡಕು ಕೂಡ ಇದೆ. ಒಂದು ವೇಳೆ ರೆಸಾರ್ಟ್ ನಿರ್ಮಾಣವಾದರೇ ದೇವಸ್ಥಾನಕ್ಕೆ ಬರೋ ಪ್ರವಾಸಿಗರು ಅಲ್ಲಿ ಹೋಗೋದನ್ನ ಬಿಟ್ಟು ನಿಮ್ಮ ಹೋಮ್ ಸ್ಟೇ ನೋಡಬೇಕಾ ಅಂತಲೇ ಸಚಿವರು ಮರು ಪ್ರಶ್ನೇ ಕೂಡ ಮಾಡಿದ್ದಾರೆ.

Edited By :
PublicNext

PublicNext

15/06/2022 07:50 am

Cinque Terre

48.04 K

Cinque Terre

3

ಸಂಬಂಧಿತ ಸುದ್ದಿ