ಬೆಂಗಳೂರು: ಮೇ24. ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ಕಾಂಗ್ರೆಸ್ ಪಾಲಿಗೆ ಕಗ್ಗಂಟಾಗಿತ್ತು. ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ನಡುವೆ ಪೈಪೋಟಿಗೆ ಕಾರಣವಾಗಿತ್ತು ಇಬ್ಬರೂ ತಮ್ಮ ತಮ್ಮ ಅಭ್ಯರ್ಥಿಗಳ ಪರ ಬ್ಯಾಟಿಂಗ್ ಗೆ ಇಳಿದಿದ್ದರು ಇದರಿಂದ ಎಚ್ಚೆತ್ತ ಕೈಕಮಾಂಡ್ ಇಬ್ಬರ ಅಭ್ಯರ್ಥಿಗಳನ್ನೂ ಕೈ ಬಿಟ್ಟು ತಾನೇ ನೇರವಾಗಿ ಅಭ್ಯರ್ಥಿಗಳನ್ನು ಘೊಷಣೆ .ಮಾಡಿಬಿಟ್ಟಿತು.
ಇದರಿಂದ ನಾಗರಾಜ್ ಯಾದವ್ ಹಾಗೂ ಅಬ್ದುಲ್ ಜಬ್ಬರ್ ಅವರಿಗೆ ಪರಿಷತ್ ಪ್ರವೇಶ ಕ್ಕೆ ಅನುಕೂಲವಾಯಿತು. ಅವರಿಬ್ಬರೂ ಇಂದು ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ನೀಡಿದ ಪ್ರತಿಕ್ರಿಯೆ ಹೀಗಿತ್ತು.
PublicNext
24/05/2022 09:16 pm