ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಸವರಾಜ V/S ಬಸವನಗೌಡ‌‌,. ಯತ್ನಾಳ್ ಬಾಯಿಗೆ ಬೀಗ ಹಾಕಲು ಬಿಜೆಪಿ ಗೆ ಧಂ ಇಲ್ವಾ?

ಬೆಂಗಳೂರು: ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ. ಹಿಂದೆಲ್ಲಾ ರಾಜ್ಯ ನಾಯಕರ ಮೇಲೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದ ಯತ್ನಾಳ್ ಈ ಬಾರಿ ನೇರವಾಗಿ ದೆಹಲಿ ನಾಯಕರ ಮೇಲೆಯೇ ಆರೋಪ ಮಾಡಿದ್ದಾರೆ!

ದೆಹಲಿಯಿಂದ ಬಂದವರು 2500 ಕೋಟಿ ಕೊಟ್ಟರೆ ನಿಮ್ಮನ್ನು ಸಿಎಂ ಮಾಡ್ತೇನೆ ಎನ್ನುವ Offer ಕೊಟ್ಟಿದ್ರು ಎಂದು ಹೇಳುವ ಮೂಲಕ ರಾಜ್ಯ ಹಾಗೂ ಕೇಂದ್ರ ಬಿಜೆಪಿ ನಾಯಕರಿಗೆ ಮುಜುಗರವುಂಟಾಗುವಂತೆ ಮಾಡಿದ್ದಾರೆ. ಯತ್ನಾಳ್ ಹೇಳಿಕೆ ವಿಪಕ್ಷಗಳ ಪಾಲಿಗಂತೂ ಮೃಷ್ಟಾನ್ನ ಭೋಜನ ಸಿಕ್ಕಿದಂತಾಗಿದ್ದು, ಬಿಜೆಪಿ ಮೇಲೆ ಮುಗಿಬಿದ್ದಿವೆ.

ಒಂದು ಕಡೆ ವಿವಾದಗಳು, ಹಗರಣಗಳಿಂದಾಗಿ ಡ್ಯಾಮೇಜ್ ಆದ ಪಕ್ಷದ ಇಮೇಜ್ ನ್ನು ಮತ್ತೆ ಸರಿಪಡಿಸಲು ಸಿಎಂ ಬಸವರಾಜ ಬೊಮ್ಮಾಯಿ ಹರಸಾಹಸ ಪಡ್ತಾ ಇದ್ರೆ, ಈ ಕಡೆ ಬಸನಗೌಡ ಪಾಟೀಲ್ ಮತ್ತೆ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿ ಪಕ್ಷಕ್ಕೂ, ಸರಕಾರಕ್ಕೂ ಮುಜುಗರ ಉಂಟು ಮಾಡುತ್ತಿದ್ದಾರೆ. ಈಗಲೂ ಯತ್ನಾಳ್ ಮೇಲೆ ಶಿಸ್ತು ಕ್ರಮ ಕೈಗೊಳ್ಳದೇ ಹೋದರೆ ಬಿಜೆಪಿಯನ್ನು ಶಿಸ್ತಿನ ಪಕ್ಷ ಅಂತ ಕರೆಯುವುದರಲ್ಲಿ ಯಾವುದೇ ಅರ್ಥ ಇರುವುದಿಲ್ಲ ಎಂದು ಅದೇ ಪಕ್ಷದ ಕಾರ್ಯಕರ್ತರು ಮಾತಾಡಿಕೊಳ್ಳುತ್ತಿದ್ದಾರೆ.‌

Edited By :
PublicNext

PublicNext

07/05/2022 07:11 pm

Cinque Terre

174.35 K

Cinque Terre

13