ಬೆಂಗಳೂರು: ಬಿಜೆಪಿ ವರಿಷ್ಠರಲ್ಲೊಬ್ಬರಾದ ಕೇಂದ್ರ ಸಚಿವ ಅಮಿತ್ ಶಾ ಅವರ ಬೆಂಗಳೂರು ಭೇಟಿ ಶುಭವಾಗಿ ಸಂಪನ್ನಗೊಂಡಿದೆ.
ಅಲ್ಲಿಗೆ ಅವರು ಬೆಂಗಳೂರಿಗೆ ಬರುವಾಗ ಕೆಲ ಬಿಜೆಪಿ ರಾಜ್ಯ ನಾಯಕರಲ್ಲಿ ಇದ್ದ ಕುತೂಹಲ, ಇನ್ನು ಕೆಲವರಲ್ಲಿದ್ದ ದುಗುಡ ಎರಡಕ್ಕೂ ಸದ್ಯಕ್ಕೆ ತೆರೆ ಬಿದ್ದಿದೆ. ಅದರಲ್ಲೂ ಬಹಳ ಮುಖ್ಯವಾಗಿ ಸಿಎಂ ಬಸವರಾಜ ಬೊಮ್ಮಾಯಿಯವರ ಪಾಲಿಗಂತೂ ಕಾರ್ಮೋಡವೊಂದು ಕರಗಿ ನೀರಾಗಿ ಹರಿದಂತೆ ಭಾಸವಾಗಿದೆ.
ಕಳೆದ ಇಡೀ ತಿಂಗಳು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಇಡೀ ರಾಜ್ಯ ಸುತ್ತಿದ್ದಕ್ಕೂ ಸಾರ್ಥಕ ಆಯ್ತು ಎಂಬ ಭಾವನೆ ಅವರಲ್ಲಿ ಪಡಿ ಮೂಡಿದೆ. ಸಿಎಂ ರಾಜ್ಯವ್ಯಾಪಿ ಪ್ರವಾಸದ ಹಿಂದಿನ ರಹಸ್ಯದ ಕುರಿತಾಗಿ 'ಪಬ್ಲಿಕ್ ನೆಕ್ಸ್ಟ್' ವಿಸ್ತೃತ ವರದಿಯನ್ನು ಈ ಹಿಂದೆ ಬಿತ್ತರಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
PublicNext
03/05/2022 07:26 pm