ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅಕ್ಷಯ ತದಿಗೆಗೆ ಹೊಸ ಸರ್ಕಾರ? ಇದು ಪಬ್ಲಿಕ್ ನೆಕ್ಸ್ಟ್ ಎಕ್ಸ್ಕ್ಲೂಸಿವ್

ಬೆಂಗಳೂರು: ಹೀಗೊಂದು ಸುದ್ದಿ ಇವತ್ತು ಬೆಳಿಗ್ಗಿನಿಂದ ಎಲ್ಲಾ ಕಡೆ ಓಡಾಡ್ತಾ ಇದೆ. ಇದಕ್ಕೆ ಇಂಬು ಕೊಡುವಂತೆ ಅನೇಕ ಪ್ರಕ್ರಿಯೆಗಳು ರಾಜ್ಯ ರಾಜಕೀಯದಲ್ಲಿ ನಡೆಯುತ್ತಿವೆ.. 40% ಕಮಿಷನ್ ಕೇಸ್ ಸರ್ಕಾರವನ್ನು ಕಂಗೆಡಿಸಿ ಹಾಕಿದೆ.

ಅದೇನೇ ಮಾಡಿದ್ರೂ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ಬಾಯಿ ಮುಚ್ಚಿಸಲು ಸಾಧ್ಯವಾಗುತ್ತಿಲ್ಲ.‌ ಬಿಜೆಪಿ ಹೈಕಮಾಂಡ್ ಗೂ ಇದು‌ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಕರ್ನಾಟಕದ ಸ್ಥಿತಿಗತಿ ಬಗ್ಗೆ ಮೇಲಿಂದ ಮೇಲೆ ವರದಿಗಳನ್ನು ತರಿಸಿಕೊಂಡ ಹೈಕಮಾಂಡ್ ಗೆ ಶಾಕಿಂಗ್ ಅನ್ನಿಸುವ ಮಾಹಿತಿ ಬಂದಿದೆ.. ಇದೇ ಇಮೇಜನ್ನು ಇಟ್ಟು ಕೊಂಡು ಚುನಾವಣೆಗೆ ಹೋದ್ರೆ ಕಷ್ಟಕಷ್ಟ ಅನ್ನುವ ವಿಚಾರ ಗೊತ್ತಾಗಿದೆ.

ಇದರಿಂದ ಎಚ್ಚೆತ್ತುಕೊಂಡ ಬಿಜೆಪಿ ವರಿಷ್ಟರು ನಿನ್ನೆಯಷ್ಟೇ ಗೌಪ್ಯ ಸಭೆ ನಡೆಸಿ ಸರ್ಕಾರದಲ್ಲಿ ಅಮೂಲಾಗ್ರ ಬದಲಾವಣೆಗೆ ಚಿಂತನೆ ನಡೆಸಿದ್ದಾರೆ ಎಂದು‌ ತಿಳಿದು ಬಂದಿದೆ.. ಈ ತಿಂಗಳ ಕೊನೆಯ ವೇಳೆಗೆ ಸಿಎಂ ಬೊಮ್ಮಾಯಿಯವರನ್ನ ದೆಹಲಿಗೆ ಕರೆಸಿಕೊಂಡು ಅತ್ಯಂತ ಮಹತ್ವದ ನಿರ್ಧಾರವನ್ನು ಹೈಕಮಾಂಡ್ ಪ್ರಕಟ ಪಡಿಸಲಿದೆ ಎಂದು ತಿಳಿದು ಬಂದಿದೆ. ಒಟ್ಟಾರೆ ಅಕ್ಷಯ ತದಿಗೆ, ಬಸವ ಜಯಂತಿ ಹೊತ್ತಿಗೆ ಹೊಸ ಸರ್ಕಾರ ಅಥವಾ ಹೊಸ ಸ್ವರೂಪದ ಸರ್ಕಾರ ಅಸ್ತಿತ್ವಕ್ಕೆ ಬರುವುದು ನಿಶ್ಚಿತವಾಗಿದೆ..

Edited By :
PublicNext

PublicNext

22/04/2022 07:05 pm

Cinque Terre

267.82 K

Cinque Terre

21