ವಿಜಯಪುರ: ಪಂಚಮಸಾಲಿ 2ಎ ಮೀಸಲಾತಿ ಹೋರಾಟ ತಾರ್ಕಿಕ ಅಂತ್ಯಕ್ಕೆ ಬಂದಂತಾಗಿದೆ. ಸರ್ಕಾರ ತೆಗೆದುಕೊಂಡ ಕಾಲವಕಾಶ ಮುಗಿದಿದೆ. ಏಪ್ರೀಲ್ 14 ಕ್ಕೆ ಕೊನೆ ಅವಕಾಶ ನೀಡಲಾಗುವುದು. ಆಗಲೂ ಈಡೇರದಿದ್ದರೆ ಕೂಡಲ ಸಂಗಮದಲ್ಲಿ ಹೋರಾಟ ಆರಂಭಿಸಲಾಗುವುದು ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಪೀಠಾಧ್ಯಕ್ಷ ಜಯಮೃತ್ಯುಂಜಯ ಶ್ರೀಗಳು ಹೇಳಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ಮೀಸಲಾತಿ ಬಗ್ಗೆ ಶಾಸಕ ಯತ್ನಾಳ ಸದನದಲ್ಲಿ ಧ್ವನಿ ಎತ್ತಿದ್ದಾರೆ. ಇಂಚಗೇರಿ ಕಾರ್ಯಕ್ರಮದಲ್ಲಿ 2 ಎ ಮೀಸಲಾತಿ ಹೋರಾಟ ಸಮಿತಿ ಸಭೆ ನಡೆಯಲಿದೆ. ಹಕ್ಕೊತ್ತಾಯದ ಬೃಹತ್ ಸಮಾವೇಶ ನಡೆಸಲಿದ್ದೇವೆ. ಅಲ್ಲಿಂದಲೇ ಸರ್ಕಾರಕ್ಕೆ ಹಕ್ಕೊತ್ತಾಯ ಸಲ್ಲಿಸುತ್ತೇವೆ ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮಿಜಿ ಹೇಳಿದ್ದಾರೆ.
PublicNext
07/04/2022 10:41 pm