ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಿಡ್ಜ್​ ನಿರ್ಮಾಣ ವೆಚ್ಚವನ್ನ 6000 ಕೋಟಿಯಿಂದ 680 ಕೋಟಿ ರೂ.ಗೆ ಇಳಿಸಿದ್ದು ಹೇಗೆ?: ಉತ್ತರ ಕೊಟ್ಟ ಗಡ್ಕರಿ

ನವದೆಹಲಿ: ಲೋಕಸಭೆಯ ಅಧಿವೇಶನದಲ್ಲಿ ಮಾತನಾಡುತ್ತಿದ್ದ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಖಾತೆ ಸಚಿವ ನಿತೀನ್ ಗಡ್ಕರಿ ಅಚ್ಚರಿಯ ಮಾಹಿತಿ ಬಿಚ್ಚಿಟ್ಟಿದ್ದು, ಎಲ್ಲಾ ಪಕ್ಷದ ಸಂಸದರೂ ಅವರನ್ನು ಅಭಿನಂದಿಸಿದ್ದಾರೆ.

ಅಸ್ಸಾಂನ ಮಜೂಲಿ ಬ್ರಿಡ್ಜ್ ನಿರ್ಮಾಣಕ್ಕೆ 6000 ಕೋಟಿ ರೂ. ವೆಚ್ಚ ತಗುಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಈ ಭಾರಿ ಮೊತ್ತದ ಯೋಜನೆಯನ್ನು 680 ಕೋಟಿ ರೂ.ಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದ ಕೀರ್ತಿ ನಿತೀನ್ ಗಡ್ಕರಿ ಅವರಿಗೆ ಸಲ್ಲುತ್ತದೆ.

ಈ ಬಗ್ಗೆ ಲೋಕಸಭೆಯಲ್ಲಿ ಮಾತನಾಡಿದ ನಿತೀನ್ ಗಡ್ಕರಿ ಅವರು, "ಅಸ್ಸಾಂನ ಮುಖ್ಯಮಂತ್ರಿಯಾಗಿದ್ದ ಸರ್ಬಾನಂದ್ ಸೋನಾವಲ್ ಅವರು, ನಾನು ಮಜೂಲಿ ಬ್ರಿಡ್ಜ್ ನಿರ್ಮಾಣ ಮಾಡುವುದಾಗಿ ಘೋಷಿಸವಂತೆ ಮಾಡ್ತಾರೆ. ಆದ್ರೆ ನಂತರದಲ್ಲೇ ನನಗೆ ಅದರ ನಿರ್ಮಾಣಕ್ಕೆ ಬರೋಬ್ಬರಿ 6 ಸಾವಿರ ಕೋಟಿ ರೂಪಾಯಿ ವೆಚ್ಚ ತಗುಲುತ್ತೆ ಅಂತ ನಮ್ಮ ಅಧಿಕಾರಿಗಳು ಮಾಹಿತಿ ನೀಡುತ್ತಾರೆ. ಆದರೆ ಜನರಿಗೆ ಮಾತುಕೊಟ್ಟಾಗಿತ್ತು. ಹೀಗಾಗಿ ಹಿಂದೆ ಸರಿಯಲು ಆಗುತ್ತಿರಲಿಲ್ಲ. ಅಷ್ಟು ಹಣ ಹಾಕುವುದೂ ಕಷ್ಟ. ಹೀಗಾಗಿ, ನಾವು ಹೊಸ ಹೊಸ ಟೆಕ್ನಾಲಜಿ ಬಳಸಿಕೊಳ್ಳಲು ನಿರ್ಧರಿಸಿದೆವು. ಮಲೇಷ್ಯಾ ಹಾಗೂ ಸಿಂಗಾಪೂರ್​​ನಿಂದ ದಿ ಬೆಸ್ಟ್​ ಟೆಕ್ನಾಲಜಿ ತಂದೆವು. ಇದೆಲ್ಲದರ ಫಲವಾಗಿ ಈ ಬ್ರಿಡ್ಜ್ ನಿರ್ಮಾಣ ವೆಚ್ಚ ಕೇವಲ 680 ಕೋಟಿ ರೂಪಾಯಿಗೆ ಇಳಿಕೆ ಕಂಡಿತು. ಸದ್ಯ ಈ ಬ್ರಿಡ್ಜ್ ನಿರ್ಮಾನ ಟೆಂಡರ್​ ಅನ್ನು ಯುಪಿ ಬ್ರಿಡ್ಜ್ ಕಾರ್ಪೋರೇಶನ್​ಗೆ ನೀಡಲಾಗಿದೆ. ಇನ್ನು ಕೆಲವೇ ವರ್ಷದಲ್ಲಿ ಇದರ ಉದ್ಘಾಟನೆಗೆ ನಾನು ಬರ್ತೀನಿ" ಎಂದು ಹೇಳಿದರು. ಸಚಿವ ನಿತೀನ್ ಗಡ್ಕರಿ ಅವರು ನೀಡಿದ ಈ ಮಾಹಿತಿಗೆ ಸದನದಲ್ಲಿದ್ದ ಎಲ್ಲಾ ಸದಸ್ಯರು ಅಭಿನಂದನೆ ಸಲ್ಲಿಸಿದರು.

Edited By : Vijay Kumar
PublicNext

PublicNext

23/03/2022 04:57 pm

Cinque Terre

64.84 K

Cinque Terre

5

ಸಂಬಂಧಿತ ಸುದ್ದಿ