ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಂಜಾಬ್‌ನಲ್ಲಿ ಭ್ರಷ್ಟಾಚಾರ ವಿರೋಧಿ ಸಹಾಯವಾಣಿ: ಸಿಎಂ ಭಗವಂತ್ ಮನ್ ಘೋಷಣೆ

ಚಂಡಿಗಢ: ನಿನ್ನೆ ಬುಧವಾರವಷ್ಟೇ ಪಂಜಾಬ್ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿರುವ ಭಗವಂತ್ ಮನ್ ಮಹತ್ವದ ಘೋಷಣೆ ಮಾಡಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ಮಟ್ಟ ಹಾಕಲು ಭ್ರಷ್ಟಾಚಾರ ವಿರೋಧಿ ಸಹಾಯವಾಣಿ ಆರಂಭಿಸಲು ಯೋಜಿಸಿದ್ದಾರೆ. ಅದ್ರಂತೆ, ರಾಜ್ಯದಲ್ಲಿ ಭ್ರಷ್ಟಾಚಾರ ವಿರೋಧಿ ಸಹಾಯವಾಣಿಯನ್ನ ಮಾರ್ಚ್ 23ರಂದು ರಾಜ್ಯದ ಜನತೆಗೆ ನೀಡಲಾಗುವುದು ಎಂದರು.

ಇನ್ಮುಂದೆ ಪಂಜಾಬ್ʼನಲ್ಲಿ ಭ್ರಷ್ಟಾಚಾರ ಇರುವುದಿಲ್ಲ ಎನ್ನುವ ವಿಶ್ವಾಸ ವ್ಯಕ್ತ ಪಡಿಸಿದ ಭಗವಂತ್ ಮನ್, “ಭಗತ್ ಸಿಂಗ್ ಅವ್ರ ಹುತಾತ್ಮ ದಿನದಂದು ನಾವು ಭ್ರಷ್ಟಾಚಾರ ವಿರೋಧಿ ಸಹಾಯವಾಣಿ ಸಂಖ್ಯೆಯನ್ನ ನೀಡುತ್ತೇವೆ. ಅದು ನನ್ನ ವೈಯಕ್ತಿಕ ವಾಟ್ಸಪ್ ಸಂಖ್ಯೆ ಆಗಿರುತ್ತದೆ. ಯಾವುದೇ ಅಧಿಕಾರಿ ಯಾವುದೇ ಲಂಚ ಕೇಳಿದರೆ, ಅದರ ವೀಡಿಯೊ/ಆಡಿಯೋ ರೆಕಾರ್ಡಿಂಗ್ ಮಾಡಿ ಮತ್ತು ಅದನ್ನ ನನಗೆ ಕಳುಹಿಸಿ. ಭ್ರಷ್ಟರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇನ್ನು ಮುಂದೆ ಪಂಜಾಬ್ʼನಲ್ಲಿ ಯಾವುದೇ ಭ್ರಷ್ಟಾಚಾರ ಇರುವುದಿಲ್ಲ” ಎಂದರು.

Edited By : Nagaraj Tulugeri
PublicNext

PublicNext

17/03/2022 05:57 pm

Cinque Terre

43.67 K

Cinque Terre

21

ಸಂಬಂಧಿತ ಸುದ್ದಿ