ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಕಿರುಕುಳ ನೀಡ್ತಿದ್ದಾರೆ: ಸರ್ಕಾರಿ ನೌಕರರ ಪ್ರತಿಭಟನೆ

ಮಂಡ್ಯ: ರವಿಕೃಷ್ಣ ರೆಡ್ಡಿ ನೇತೃತ್ವದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರು ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ವಿವಿಧ ಇಲಾಖೆಗಳ ಸರ್ಕಾರಿ ನೌಕರರು ಆರೋಪಿಸಿದ್ದಾರೆ. ಈ ಬಗ್ಗೆ ಮದ್ದೂರು ತಹಶೀಲ್ದಾರ್ ನರಸಿಂಹಮೂರ್ತಿಗೆ ನೌಕರರು ಮನವಿ ಸಲ್ಲಿಸಿದ್ದಾರೆ.

ಪಾಂಡವಪುರ ಉಪ ವಿಭಾಗಾಧಿಕಾರಿ, ತಹಸೀಲ್ದಾರ್ ಮತ್ತು 15 ಮಂದಿ ನೌಕರರ ಮೇಲೆ KRS ಪಕ್ಷದ ಕಾರ್ಯಕರ್ತರು FI R ದಾಖಲು ಮಾಡಿರುವುದನ್ನು ಖಂಡಿಸಿ ಜಿಲ್ಲೆಯ ಸರ್ಕಾರಿ ನೌಕರರು ಜ.31ರಂದು ಸಾಮೂಹಿಕ ರಜೆ ಹಾಕುವ ಮೂಲಕ ಘಟನೆ ಖಂ ಡಿಸಲಾಗುವುದು ಎಂದು ನೌಕರರು ತಿಳಿಸಿದ್ದಾರೆ. ತಾಲೂಕು ಕಚೇರಿ ಆವರಣದಲ್ಲಿ ಜಮಾಯಿಸಿದ ಕರ್ನಾಟಕ ರಾಜ್ಯ ಸರ್ಕಾರಿ ಕಂದಾಯ ಇಲಾಖೆಯ ನೌಕರರ ಸಂಘ, ಕರ್ನಾಟಕ ರಾಜ್ಯ ಸರ್ಕಾರಿ ಗ್ರಾಮ ಲೆಕ್ಕಾಧಿಕಾರಿಗಳ ಸಂಘ, ಕರ್ನಾಟಕ ರಾಜ್ಯ ಸರ್ಕಾರಿ ಭೂಮಾಪಕರುಗಳ ಸಂಘ, ಕರ್ನಾಟಕ ರಾಜ್ಯ ಗ್ರಾಮ ಸಹಾಯಕರ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು. ಪಾಂಡವಪುರ ತಾಲೂಕಿನ ತಹಸೀಲ್ದಾರ್ ಕಚೇರಿಗೆ KRS ಪಕ್ಷದ ಕಾರ್ಯಕರ್ತರು ನುಗ್ಗಿ ದಬ್ಬಾಳಿಕೆ ಮಾಡಿ ದಾಂಧಲೆ ನಡೆಸಿ ಪಾಂಡವಪುರ ಉಪವಿಭಾಗಾಧಿಕಾರಿ, ತಹಸೀಲ್ದಾರ್ ಮತ್ತು ಕಚೇರಿ ಸಿಬ್ಬಂದಿ ವರ್ಗದವರಿಗೆ ಹಾಗೂ ಭೂಮಾಪಕರಿಗೆ ಅವ್ಯಾಚ ಶಬ್ದಗಳಿಂದ ನಿಂಧಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿ ತೊಂದರೆ ನೀಡಿದ್ದಾರೆ. ಅಲ್ಲದೇ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ತಹಶೀಲ್ದಾರ್ ಸೇರಿದಂತೆ 15 ಜನ ನೌಕರರ ಮೇಲೆ ಕಾನೂನು ಬಾಹಿರವಾಗಿ ಸುಳ್ಳು ಮೊಕದ್ದಮೆ ದಾಖಲಿಸಿ FIR ಹಾಕಿರುವ ಸಂಬಂಧ ಜ.31 ರಂದು ಮಂಡ್ಯ ಜಿಲ್ಲಾ ಸಮಸ್ತ ಭೂಮಾಪನಾ ಇಲಾಖೆಯ ನೌಕರರು ಮತ್ತು ಕಂದಾಯ ಇಲಾಖೆಯ ನೌಕರರು ಸಾಮೂಹಿಕವಾಗಿ ಸಾಂದರ್ಭಿಕ ರಜೆಯನ್ನು ಸಲ್ಲಿಸುವ ಮೂಲಕ ಘಟನೆಯನ್ನು ತೀವ್ರವಾಗಿ ಖಂಡಿಸಲಾಗುತ್ತಿದೆ ಎಂದು ತಿಳಿಸಿದರು.

Edited By : Nagaraj Tulugeri
PublicNext

PublicNext

30/01/2022 08:41 am

Cinque Terre

46.96 K

Cinque Terre

1

ಸಂಬಂಧಿತ ಸುದ್ದಿ