ಬೆಂಗಳೂರು: ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷರನ್ನಾಗಿ ಮಾಜಿ ಸ್ಪೀಕರ್ ಕೆ.ಆರ್ ರಮೇಶ್‌ಕುಮಾರ್ ಅವರನ್ನು ನೇಮಿಸಲಾಗಿದೆ.
ವಿಧಾನಮಂಡಲದ ಜಂಟಿ ಸ್ಥಾಯಿ ಸಮಿತಿಗಳು ಹಾಗೂ ವಿಧಾನಸಭೆಯ ಸಮಿತಿಗಳ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಿ ಸೋಮವಾರ ಆದೇಶ ಹೊರಡಿಸಿದೆ.
ಇದರ ಪಟ್ಟಿ ಈ ಕೆಳಗಿನಂತಿದೆ...
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಮಿತಿ– ಎಂ.ಪಿ. ಕುಮಾರಸ್ವಾಮಿ
ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ– ಎಸ್. ಕುಮಾರ್ ಬಂಗಾರಪ್ಪ
ಸಾರ್ವಜನಿಕ ಉದ್ದಿಮೆಗಳ ಸಮಿತಿ– ಜಿ.ಎಚ್. ತಿಪ್ಪಾರೆಡ್ಡಿ,
ಅಧೀನ ಶಾಸನ ರಚನಾ ಸಮಿತಿ– ಎಲ್.ಎ. ರವಿ ಸುಬ್ರಹ್ಮಣ್ಯ
ಸಭೆಯ ಮುಂದಿಡಲಾದ ಕಾಗದ ಪತ್ರಗಳ ಸಮಿತಿ– ಸಾ.ರಾ. ಮಹೇಶ್
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ– ಕೆ. ಪೂರ್ಣಿಮಾ
ಹಾಗೂ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್ ರಾಜ್ ಸಮಿತಿ– ಜಿ. ಸೋಮಶೇಖರ ರೆಡ್ಡಿ
ವಿಧಾನಸಭೆಯ ಸಮಿತಿಗಳು..
ಅಂದಾಜುಗಳ ಸಮಿತಿ– ಅಭಯ ಪಾಟೀಲ
ಸರ್ಕಾರಿ ಭರವಸೆಗಳ ಸಮಿತಿ– ಕೆ. ರಘುಪತಿ ಭಟ್
ಹಕ್ಕು ಬಾಧ್ಯತೆಗಳ ಸಮಿತಿ– ಬಸನಗೌಡ ಆರ್. ಪಾಟೀಲ ಯತ್ನಾಳ
PublicNext
28/12/2021 10:55 pm