ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪರಿಷತ್ ಚುನಾವಣೆಗೆ ಸಿದ್ಧತೆ : ಡಿ.ಸಿ ಮಾಹಿತಿ

ಬೆಂಗಳೂರು : ಬೆಂಗಳೂರು ಉತ್ತರ ತಾಲೂಕು 11 ಮತಗಟ್ಟೆ, ಯಲಹಂಕ ತಾಲೂಕು 18 ಮತಗಟ್ಟೆ, ಬೆಂಗಳೂರು ದಕ್ಷಿಣ ತಾಲೂಕು 15 ಮತಗಟ್ಟೆ, ಬೆಂಗಳೂರು ಪೂರ್ವ 11 ಮತಗಟ್ಟೆ, ಆನೇಕಲ್ ತಾಲೂಕು 31 ಮತಗಟ್ಟೆ ಸೇರಿ ಒಟ್ಟು 86 ಮತಗಟ್ಟೆಗಳಿವೆ.

ಅದರಲ್ಲಿ 38 ಮತಗಟ್ಟೆಗಳು ಸೂಕ್ಷ್ಮ,3 ಅತೀಸೂಕ್ಷ್ಮ,45 ಮತಗಟ್ಟೆಯನ್ನು ಸಾಮಾನ್ಯ ಮತಗಟ್ಟೆಯನ್ನಾಗಿ ಮಾಡಲಾಗಿದೆ. ಈ ಮತಗಟ್ಟೆಗಳಲ್ಲಿ ಒಟ್ಟು 2073 ಮತದಾರರು ಮತದಾನ ಮಾಡಲಿದ್ದಾರೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಹೇಳಿದ್ದಾರೆ.

ವಿಧಾನ ಪರಿಷತ್ ದ್ವೈವಾರ್ಷಿಕ ಚುನಾವಣೆ ಹಿನ್ನಲೆಯಲ್ಲಿಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಡಿಸಿ ಮಾಹಿತಿ ನೀಡಿದ್ದಾರೆ. ಇನ್ನು ಡಿ.10 ರಂದು ನಡೆಯಲಿರುವ ವಿಧಾನ ಪರಿಷತ್ ದ್ವೈವಾರ್ಷಿಕ ಚುನಾವಣೆಗಾಗಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ಸಿದ್ಧತೆಗಳ ಕುರಿತು ಮಾಹಿತಿ ನೀಡಿದ ಡಿಸಿ ಯಲಹಂಕ ವಿಧಾನಸಭಾ ಕ್ಷೇತ್ರದ ಸೊಣ್ಣೇನಹಳ್ಳಿಯ ಗ್ರಾ.ಪಂ ಸದಸ್ಯೆ, ಸಾತನೂರು ಗ್ರಾ.ಪಂ ನ ಸದಸ್ಯರು ಸಹಾಯಕರು ಮತದಾನ ಮಾಡಲಿದ್ದಾರೆ. ಇದಕ್ಕಾಗಿ 17 ಬಿಎಂಟಿಸಿ ಬಸ್ ಗಳ ವ್ಯವಸ್ಥೆ ಮಾಡಲಾಗಿದ್ದು, ಭದ್ರತೆಗಾಗಿ 313 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ಇನ್ನು ಚುನಾವಣೆಯ ಹಿನ್ನೆಲೆಯಲ್ಲಿ ಇಂದು ಸಂಜೆ 4 ಗಂಟೆಯಿಂದ 10 ರ ರಾತ್ರಿ 10 ಗಂಟೆವರೆಗೂ ಮದ್ಯಮಾರಾಟಕ್ಕೆ ಬ್ರೇಕ್ ಹಾಕಲಾಗಿದೆ. ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಈ ನಿಯಮ ಜಾರಿಯಲ್ಲಿರಲಿದ್ದು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಡಿಸೆಂಬರ್ 14 ರ ಬೆಳಗ್ಗೆ 8 ಗಂಟೆಗೆ ಮತ ಏಣಿಕೆ ಆರಂಭವಾಗಲಿದೆ.

Edited By : Manjunath H D
PublicNext

PublicNext

08/12/2021 01:24 pm

Cinque Terre

48.74 K

Cinque Terre

0

ಸಂಬಂಧಿತ ಸುದ್ದಿ