ಎಕ್ಸ್‌ಕ್ಲೂಸಿವ್ ವರದಿ: ಗಣೇಶ್ ಹೆಗಡೆ
ಬೆಂಗಳೂರು: ಬಿಬಿಎಂಪಿ ಚುನಾ ವಣೆ ನಡೆಸಲು ಆಡಳಿತ ಪಕ್ಷ ಬಿಜೆಪಿ ಹಿಂದೇಟು ಹಾಕುತ್ತಿದೆ. ಸದ್ಯ, ನಗರದಲ್ಲಿ ಆಡಳಿತ ಪಕ್ಷ ಬಿಜೆಪಿಯ ವರ್ಚಸ್ಸು ಕಡಿಮೆಯೇ ಇದೆ.
ಈ ಸಂಬಂಧ ಮಾರ್ಚ್ ಬಜೆಟ್ ನಲ್ಲಿ ಬೆಂಗಳೂರು ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನಲ್ಲಿ ಸಚಿವರ ಜತೆ ಸಮಾಲೋಚನೆ ನಡೆಸಿದ್ದಾರೆ. ಶಾಸಕರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಚುನಾವಣೆ ಮುಂದೂಡುವ ಬಗ್ಗೆ ಆಲೋಚನೆ ನಡೆದಿದೆ.
ಬಜೆಟ್ ಬಳಿಕವೇ ಚುನಾವಣೆಗೆ ಹೋದರೆ ಒಳ್ಳೆಯದು ಎಂಬ ಆಲೋಚನೆ ಬಿಜೆಪಿ ಸರ್ಕಾರಕ್ಕೆ ಬಂದಿದೆ. ಮುಂದಿನ ತಿಂಗಳು ಡಿ. 6 ರಂದು ಸುಪ್ರೀಂ ಕೋರ್ಟ್ ನಲ್ಲಿ ಬಿಬಿಎಂಪಿ ಚುನಾವಣೆ ಕುರಿತ ಅರ್ಜಿ ವಿಚಾರಣೆಗೆ ಬರಲಿದೆ.
PublicNext
30/11/2021 11:49 am