ನವದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಅನರ್ಹ ಫಲಾನುಭವಿಗಳ ಪಟ್ಟಿ ಮಾಡಲಾಗಿದೆ. ಯೋಜನೆಯ ಲಾಭ ಪಡೆದ ಅನರ್ಹ ರೈತರು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸಂದಾಯವಾದ ಹಣವನ್ನು ವಾಪಸ್ ನೀಡಬೇಕಿದೆ. ವಾಸ್ತವವಾಗಿ, ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದ ರೈತರು ಸೇರಿದಂತೆ ಕೆಲವು ಜನರನ್ನ ಪಿಎಂ ಕಿಸಾನ್ ಯೋಜನೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ.
ಪಿಎಂ ಕಿಸಾನ್ ಯೋಜನೆಯಲ್ಲಿ ವಂಚನೆಯ ದೂರುಗಳ ತನಿಖೆಯ ಸಮಯದಲ್ಲಿ, ಉತ್ತರ ಪ್ರದೇಶದ ಬರೇಲಿಯಲ್ಲಿಯೇ 55,243 ಅನರ್ಹ ರೈತರು ಸಿಕ್ಕಿಬಿದ್ದಿದ್ದಾರೆ. ಇವರು ಅನರ್ಹರು, ಇವರು ಸರ್ಕಾರಿ ನೌಕರಿಯಲ್ಲಿದ್ದವರು ಅಥವಾ ಕೃಷಿಕರ ಜೊತೆಗೆ ಯಾವುದೇ ವ್ಯಾಪಾರ ಮಾಡುತ್ತಿದ್ದವರು. ಇದಾದ ನಂತರವೂ ಪಿಎಂ ಕಿಸಾನ್ ಯೋಜನೆಯಡಿ ಅವರ ಖಾತೆಗೆ 2000 ರೂಪಾಯಿ ಜಮೆಯಾಗುತ್ತಿದೆ. ಸೆಪ್ಟೆಂಬರ್ 2021ರಲ್ಲಿ, ಜಿಲ್ಲಾ ಮಟ್ಟದಲ್ಲಿ ತನಿಖೆ ನಡೆಸಲಾಯಿತು, ಈ ವಂಚನೆಯು ಬೆಳಕಿಗೆ ಬಂದಿತು. ಈ ವೇಳೆ ಜಿಲ್ಲಾ ಕೃಷಿ ಇಲಾಖೆಯಿಂದ ಅನರ್ಹ ರೈತರಿಗೆ ವಸೂಲಾತಿ ನೋಟಿಸ್ ನೀಡಲಾಗುತ್ತಿದೆ.
PublicNext
16/11/2021 08:40 pm