ಬೆಂಗಳೂರು: ಮುಂದಿನ ತಿಂಗಳು ಡಿ.10ರಂದು ನಡೆಯುವ ವಿಧಾನ ಪರಿಷತ್ ಚುನಾವಣೆಗೆ ಇದ್ದ ಮತದಾನದ ಹಕ್ಕಿನಿಂದ ಬಿಬಿಎಂಪಿ ಮಾಜಿ ಸದಸ್ಯರು ವಂಚಿತರಾಗಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 198 ವಾರ್ಡ್ ನ ಸದಸ್ಯರ ಆಡಳಿತ ಅವಧಿ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಆಡಳಿತಾಧಿಕಾರಿ ನೇತೃತ್ವದಲ್ಲಿ ಆಡಳಿತ ಪಾಲಿಕೆಯಲ್ಲಿದೆ.
ಇದರಿಂದ ಪರಿಷತ್ ಚುನಾವಣೆಗೆ ಮತದಾರರ ಸಂಖ್ಯೆ ಇಳಿಕೆಯಾಗಿದೆ. ನಗರ ವ್ಯಾಪ್ತಿಯಲ್ಲಿ 703 ಮತಗಳು ಇಳಿಕೆ ಕಂಡಿದೆ.
25 ವಿಧಾನ ಪರಿಷತ್ ಕ್ಷೇತ್ರಗಳ ಚುನಾವಣೆಯಲ್ಲಿ ಬೆಂಗಳೂರು ನಗರ ಒಂದು ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 2059 ಮತದಾರರಿದ್ದು, 86 ಮತಗಟ್ಟೆಗಳಿವೆ. ಕಳೆದ ಚುನಾವಣೆಯಲ್ಲಿ ಮತದಾನ ಮಾಡಿದ್ದ 703 ಮತಗಳು ಕಮ್ಮಿ ಆಗಿದೆ.
ಬಿಬಿಎಂಪಿ, ಎರಡು ನಗರ ಸಭೆ, ಮೂರು ಗ್ರಾಮ ಪಂಚಾಯಿತಿಗಳಲ್ಲಿ ಚುನಾಯಿತ ಪ್ರತಿನಿಧಿಗಳು ಇಲ್ಲ. ಕಾರಣ ಪರಿಷತ್ ಚುನಾವಣೆಯಲ್ಲಿ ಸದಸ್ಯರು ಭಾಗಿಯಾಗುತ್ತಿಲ್ಲ.
PublicNext
16/11/2021 03:37 pm