ವರದಿ: ಗಣೇಶ್ ಹೆಗಡೆ
ಬೆಂಗಳೂರು: ಕನ್ನಡದ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ನ.21ಕ್ಕೆ ನಿಗದಿಯಾಗಿದೆ. ಚುನಾವಣೆ ಕಣದಲ್ಲಿರುವ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ನಾನಾ ರೀತಿಯ ಕಸರತ್ತು ನಡೆಸುತ್ತಿದ್ದಾರೆ.
107 ವರ್ಷಗಳ ಇತಿಹಾಸ ಹೊಂದಿರುವ ಕಸಾಪದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಈ ಬಾರಿ 21 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ರಾಜ್ಯದ 30 ಜಿಲ್ಲೆಗಳಲ್ಲಿ 3.10 ಲಕ್ಷ ಮತದಾರರು ಇದ್ದಾರೆ. ಬೆಂಗಳೂರು ನಗರದಲ್ಲಿ 36,491 ಕಸಾಪ ಸದಸ್ಯರಿದ್ದಾರೆ. ಉಡುಪಿಯಲ್ಲಿ ಅತಿ ಕಡಿಮೆ 1987 ಸದಸ್ಯರಿದ್ದಾರೆ.
ನ. 21 ರಂದು ಬೆಳಗ್ಗೆ 8ರಿಂದ 4 ಗಂಟೆವರೆಗೆ ಚುನಾವಣೆ ನಡೆಯಲಿದೆ. ಅಂದೇ ಮತ ಎಣಿಕೆ ಕಾರ್ಯ ಕೂಡ ನಡೆಯಲಿದೆ. ಜಿಲ್ಲಾ ಘಟಕದ ಅಧ್ಯಕ್ಷರ ಫಲಿತಾಂಶ ಘೋಷಣೆ ಆಗಲಿದೆ.
ತದನಂತರ ನ. 24 ರಂದು ಅಂತಿಮ ಚುನಾವಣಾ ಫಲಿತಾಂಶ ಹಾಗೂ ಕಸಾಪ ಅಧ್ಯಕ್ಷರ ಆಯ್ಕೆ ಬಗ್ಗೆ ಘೋಷಣೆ ಆಗಲಿದೆ. ಈ ಸಂಬಂಧ ಪ್ರಚಾರವೂ ಬಿರುಸುಗೊಂಡಿದೆ. ಮತದಾರರನ್ನು ಸೆಳೆಯಲು ನಾನಾ ರೀತಿಯ ಪ್ರಯತ್ನ ಕಣದಲ್ಲಿದ್ದವರಿಂದ ನಡೆಯುತ್ತಿದೆ.
PublicNext
16/11/2021 10:48 am