ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ತೈಲ ಬೆಲೆ ಏರಿಕೆ ಪ್ರಮುಖ ವಿಚಾರವೇ ಅಲ್ಲ, ದೇಶದ ಶೇ.95 ಜನರಿಗೆ ಪೆಟ್ರೋಲ್​ ಅಗತ್ಯವಿಲ್ಲ: ಯುಪಿ ಸಚಿವ

ಲಕ್ನೋ: ದೇಶದಲ್ಲಿ ದಿನದಿಂದ ದಿನಕ್ಕೆ ತೈಲ ಬೆಲೆ ಏರಿಕೆಯಾಗುತ್ತಿದ್ದು, ಸವಾರರು ಹಾಗೂ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಇದೆಲ್ಲವನ್ನೂ ತಳ್ಳಿ ಹಾಕಿರುವ ಉತ್ತರ ಪ್ರದೇಶ ಸಚಿವ ಉಪೇಂದ್ರ ತಿವಾರಿ ಅವರು, "ದೇಶದ ಶೇಕಡಾ 95ರಷ್ಟು ಜನರಿಗೆ ಪೆಟ್ರೋಲ್ ಅಗತ್ಯವೇ ಇಲ್ಲ. ಕೇವಲ ಕೆಲವು ಮಂದಿ ಮಾತ್ರ ಫೋರ್ ವೀಲರ್​ಗಳನ್ನು ಬಳಸುತ್ತಾರೆ" ಎಂದು ಹೇಳುವ ಮೂಲಕ ನಗೆಪಾಟಲಿಗೀಡಾಗಿದ್ದಾರೆ..

ಜಲೌನ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, "2014 ರಲ್ಲಿ ತಲಾ ಆದಾಯಕ್ಕೆ ಹೋಲಿಸಿದರೆ ತೈಲ ಬೆಲೆಗಳು ನಿಜವಾಗಿಯೂ ಏರಿಕೆಯಾಗಿಲ್ಲ. ಇಂದು, ನಾಲ್ಕು-ಚಕ್ರ ವಾಹನಗಳಲ್ಲಿ ಪ್ರಯಾಣಿಸುವ ಮತ್ತು ಪೆಟ್ರೋಲ್ ಬಳಸುವ ಕೆಲವೇ ಜನ ಇದ್ದಾರೆ. ಪ್ರಸ್ತುತ, ಶೇ. 95 ರಷ್ಟು ಜನರಿಗೆ ಪೆಟ್ರೋಲ್ ಅಗತ್ಯವಿಲ್ಲ" ಎಂದು ಹೇಳಿದ್ದಾರೆ.

ದೇಶ ಬಹು ಭಾಗಗಳಲ್ಲಿ ಪೆಟ್ರೋಲ್‌ ಬೆಲೆ ನೂರರ ಗಡಿ ದಾಟಿರುವ ಹೊತ್ತಿನಲ್ಲಿ ತಿವಾರಿ ಈ ಹೇಳಿಕೆ ನೀಡಿದ್ದಾರೆ. ಕೇಂದ್ರದ ವಿರುದ್ಧ ಆರೋಪ ಮಾಡಲು ಪ್ರತಿಪಕ್ಷಗಳಿಗೆ ಬೇರೆ ಯಾವುದೇ ವಿಚಾರಗಳಿಲ್ಲ ಎಂದಿದ್ದಾರೆ.

ಕೇಂದ್ರ ಮತ್ತು ಉತ್ತರ ಪ್ರದೇಶದಲ್ಲಿ ಅಸ್ತಿತ್ವದಲ್ಲಿರುವ ಬಿಜೆಪಿ ಆಡಳಿತವನ್ನು ಉಲ್ಲೇಖಿಸಿ, ʼ2014ರ ಹಿಂದಿನ ಅಂಕಿ-ಅಂಶಗಳನ್ನು ನೀವು ನೋಡಬಹುದು. ಮೋದಿ ಮತ್ತು ಯೋಗಿ ಸರ್ಕಾರಗಳು ರಚನೆಯಾದ ನಂತರ ತಲಾದಾಯ ಎಷ್ಟಿದೆ ಎಂದು ಪ್ರಶ್ನಿಸಿದ್ದಾರೆ.

ಇಂದು ತಲಾದಾಯ ದ್ವಿಗುಣಗೊಂಡಿದೆ. ಅದೇರೀತಿ‌, ಉಚಿತ ಶಿಕ್ಷಣ ಮತ್ತು ಕೋವಿಡ್‌ ಲಸಿಕೆ ನೀಡಲಾಗಿದೆ ಎನ್ನುವ ಮೂಲಕ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

Edited By : Vijay Kumar
PublicNext

PublicNext

22/10/2021 08:16 am

Cinque Terre

66.27 K

Cinque Terre

21

ಸಂಬಂಧಿತ ಸುದ್ದಿ