ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಡಳಿತಕ್ಕೆ ಮೇಜರ್ ಸರ್ಜರಿ: 10 ಐಎಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು : ಸಿಎಂ ಬೊಮ್ಮಾಯಿ ಸರ್ಕಾರ ಆಡಳಿತಕ್ಕೆ ಮೇಜರ್ ಸರ್ಜರಿ ಮಾಡಿದೆ. 10 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ವಿಧಾನಮಂಡಲ ಅಧಿವೇಶನ ನಡೆಯುತ್ತಿರುವಾಗಲೇ ಆಡಳಿತದಲ್ಲಿ ಈ ದಿಢೀರ್​ ಬದಲಾವಣೆ ನಡೆದಿದೆ. ಬೊಮ್ಮಾಯಿ ಸಿಎಂ ಆದ ಬಳಿಕ ಇಷ್ಟು ದೊಡ್ಡ ಪ್ರಮಾಣದಲ್ಲಿ ಇದೇ ಮೊದಲ ಬಾರಿಗೆ ವರ್ಗಾವಣೆ ಮಾಡಲಾಗಿದೆ.

ವರ್ಗಾವಣೆಯಾದ ಐಎಎಸ್ ಅಧಿಕಾರಿಗಳು...

ಅನಿಲ್ ಕುಮಾರ್ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ

ಡಾ.ಸೆಲ್ವಕುಮಾರ್ - ಸಹಕಾರ ಇಲಾಖೆ ಕಾರ್ಯದರ್ಶಿ

ರಶ್ಮಿ ಮಹೇಶ್- ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ

ಡಾ.ವಿಶಾಲ್ ಆರ್-ಸಾರ್ವಜನಿಕ ಮಾಹಿತಿ ಇಲಾಖೆ ಆಯುಕ್ತ

ಅಂಬುಕುಮಾರ್ - ಬಿಎಂಟಿಸಿ ಎಂಡಿ

ಡಾ.ರೇಜು ಎಂಟಿ - ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ಎಂಡಿ

ಡಾ.ರವಿಶಂಕರ್- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ವೈದ್ಯಕೀಯ ಶಿಕ್ಷಣ) ಕಾರ್ಯದರ್ಶಿ

ಡಾ.ರಾಂ ಪ್ರಸಾತ್ ಮನೋಹರ್-ಬಿಬಿಎಂಪಿ ವಿಶೇಷ ಆಯುಕ್ತ (ಕಂದಾಯ)

ಪಿ ಎನ್ ರವೀಂದ್ರ - ಇನ್ಸ್ ಪೆಕ್ಟರ್ ಜನರಲ್ ಆಫ್ ರಿಜಿಸ್ಟ್ರೇಷನ್ ಮತ್ತು ಮುದ್ರಾಂಕ ಇಲಾಖೆ ಆಯುಕ್ತ

ಕೆ ಪಿ ಮೋಹನ್ ರಾಜ್ - ಹುದ್ದೆ ನಿಯೋಜಿಸದೇ ವರ್ಗಾವಣೆ

Edited By : Nagaraj Tulugeri
PublicNext

PublicNext

15/09/2021 09:30 am

Cinque Terre

36.66 K

Cinque Terre

0

ಸಂಬಂಧಿತ ಸುದ್ದಿ