ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗುಡ್‌ನ್ಯೂಸ್‌: ಪೆಟ್ರೋಲ್, ಡೀಸೆಲ್ ಬೆಲೆ ಮತ್ತಷ್ಟು ಇಳಿಕೆ ಸಾಧ್ಯತೆ

ನವದೆಹಲಿ: ದೇಶದ ಕೆಲವು ರಾಜ್ಯಗಳಲ್ಲಿ ಪೆಟ್ರೋಲ್ ದರ ಲೀಟರ್‌ಗೆ 100 ರೂ. ಗಡಿಯನ್ನು ದಾಟಿದೆ. ಆದರೆ ಜಿಎಸ್‌ಟಿ ವ್ಯಾಪ್ತಿಗೆ ತೈಲ ದರಗಳನ್ನು ಇಳಿಸಿದರೆ ಗ್ರಾಹಕರಿಗೆ ಅನುಕೂಲವಾಗಲಿದೆ. ಆದರೆ ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲಿಯಂ ಉತ್ಪನ್ನಗಳನ್ನು ತರುವ ರಾಜಕೀಯ ಇಚ್ಛಾ ಶಕ್ತಿಗೆ ಕೊರತೆ ಇದೆ.

ಕಳೆದ ಹಲವು ವರ್ಷಗಲಿಂದ ಪೆಟ್ರೋಲ್, ಡೀಸೆಲ್ ಜಿಎಸ್‌ಟಿ ಅಡಿಗೆ ತರಲು ಹಲವು ಚರ್ಚೆಗಳು ನಡೆದಿದೆ. ಇದಕ್ಕೆ ಪರ ವಿರೋಧಗಳು ಈಗಲೂ ಇದೆ. ಇದೀಗ ಬೆಲೆ ನಿಯಂತ್ರಣಕ್ಕೆ ದೇಶದಲ್ಲಿ ಒಂದೇ ರೂಪದ ತೆರೆಗೆ ಪದ್ದತಿಯಾಗಿರುವ ಜಿಎಸ್‌ಟಿ ಅಡಿಗೆ ತರಲು ಕೇಂದ್ರ ಮುಂದಾಗಿದೆ.

ಇದೇ ಶುಕ್ರವಾರ(ಸೆಪ್ಟೆಂಬರ್ 17) ಲಕ್ನೋದಲ್ಲಿ 45ನೇ ಜಿಎಸ್‌ಟಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಬೆಲೆ ನಿಯಂತ್ರಣಕ್ಕೆ ಜಿಎಸ್‌ಟಿ ಅಡಿಯಲ್ಲಿ ತೈಲ ಬೆಲೆ ತರವು ಕುರಿತ ಪ್ರಸ್ತಾವನೆಯನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಲ್ಲಿಸಲಿದ್ದಾರೆ. ಈ ಕುರಿತು ಹಲವು ರಾಜ್ಯಗಳು ಸಮ್ಮತಿ ಸೂಚಿಸಿದರೆ, ಕೆಲ ರಾಜ್ಯಗಳು ವಿರೋಧ ವ್ಯಕ್ತಪಡಿಸಿದೆ.

ಎಲ್ಲಾ ರಾಜ್ಯದ ಪ್ರತಿನಿಧಿಗಳನ್ನು ಹೊಂದಿರುವ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಈ ಪ್ರಸ್ತಾವನೆಗೆ ಅನುಮತಿ ಸಿಕ್ಕರೆ, ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಗಣನೀಯವಾಗಿ ಕಡಿಮೆಯಾಗಲಿದೆ. ಈ ಕುರಿತು ಕೇಂದ್ರ ಸರ್ಕಾರ ಒಂದು ಸುತ್ತಿನ ಮಾತುಕತೆ ನಡೆಸಿದೆ.

Edited By : Vijay Kumar
PublicNext

PublicNext

14/09/2021 08:36 pm

Cinque Terre

108.26 K

Cinque Terre

60

ಸಂಬಂಧಿತ ಸುದ್ದಿ