ದೆಹಲಿ : ಅಡುಗೆ ಅನಿಲ, ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆ ಕುರಿತು ಕಾಂಗ್ರೆಸ್ ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. "ಜಿಡಿಪಿ ಏರಿಕೆಯಾಗುತ್ತಿದೆ ಎಂದು ಮೋದಿ ಜೀ ಹೇಳುತ್ತಲೇ ಇದ್ದಾರೆ. ಜಿಡಿಪಿಯ ಹೊಸ ಪರಿಕಲ್ಪನೆ ಎಂದರೆ 'ಗ್ಯಾಸ್-ಡೀಸೆಲ್-ಪೆಟ್ರೋಲ್' ಬೆಲೆ ಏರಿಕೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ರಾಗಾ 2014 ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರವನ್ನು ತೊರೆದಾಗ, ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್ (ಎಲ್ ಪಿಜಿ) ಪ್ರತಿ ಸಿಲಿಂಡರ್ ಗೆ 410 ರೂ ಆಗಿತ್ತು. ರೈತರು, ಸಂಬಳ ಪಡೆಯುವ ವರ್ಗ ಮತ್ತು ಕಾರ್ಮಿಕರಿಗೆ ನೋಟು ರದ್ದತಿ ಮಾಡಲಾಗುತ್ತಿದ್ದರೆ, ಪ್ರಧಾನಿ ನರೇಂದ್ರ ಮೋದಿಯ ಕೆಲವು ಕೈಗಾರಿಕೋದ್ಯಮಿ ಸ್ನೇಹಿತರಿಗೆ ಹಣಗಳಿಸುವಂತೆ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಸಬ್ಸಿಡಿ ಮತ್ತು ಸಬ್ಸಿಡಿ ರಹಿತ ಎಲ್ ಪಿಜಿಗೆ ಈಗ ತೈಲ ಕಂಪನಿಗಳ ಬೆಲೆ ಅಧಿಸೂಚನೆಯ ಪ್ರಕಾರ ದೆಹಲಿಯಲ್ಲಿ 14.2 ಕೆಜಿ ಸಿಲಿಂಡರ್ ಗೆ 884.50 ರೂ. ಆಗಿದೆ. ಎರಡು ತಿಂಗಳಲ್ಲಿ ಇದು ಮೂರನೇ ಬಾರಿ ದರ ಹೆಚ್ಚಾಗಿರುವುದು, ಜುಲೈ 1 ರಂದು ಸಬ್ಸಿಡಿ ಮತ್ತು ಸಬ್ಸಿಡಿ ರಹಿತ ಎಲ್ ಪಿಜಿ ದರಗಳನ್ನು ಪ್ರತಿ ಸಿಲಿಂಡರ್ ಗೆ 25.50 ರೂ. ಏರಿಕೆ ಮಾಡಲಾಗಿತ್ತು. ಸಬ್ಸಿಡಿ ಎಲ್ ಪಿಜಿ ಬೆಲೆಯಲ್ಲಿ ಇತ್ತೀಚಿನ ಹೆಚ್ಚಳವು ಜನವರಿ 1 ರಿಂದ ಸಿಲಿಂಡರ್ ಗೆ 190 ರೂ. ಏರಿಕೆಯಾಗಿದೆ.
PublicNext
02/09/2021 02:12 pm