ಬೆಂಗಳೂರು: ರಾಜ್ಯದ ಮಹಾನಗರ ಪಾಲಿಕೆಗಳು, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಟ್ಟಣ ಪಂಚಾಯ್ತಿಗಳಿಗೆ ಸಾರ್ವತ್ರಿಕ ಚುನಾವಣೆ, ಉಪ ಚುನಾವಣೆಯನ್ನು ರಾಜ್ಯ ಚುನಾವಣಾ ಆಯೋಗವು ಘೋಷಿಸಿದೆ. ಸೆಪ್ಟೆಂಬರ್ 3ರಂದು ಮತದಾನ ನಡೆಯಲಿದ್ದು, ಅಂದು ನಗರ ಸ್ಥಳೀಯ ಸಂಸ್ಥೆಯ ಆಯಾ ವಾರ್ಡಿನ ವ್ಯಾಪ್ತಿಯಲ್ಲಿರುವ ಎಲ್ಲಾ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು ಮತ್ತು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ರಜೆ ಘೋಷಣೆ ಮಾಡಿ ಸರ್ಕಾರ ಆದೇಶಿಸಿದೆ.
ಈ ಕುರಿತಂತೆ ರಾಜ್ಯ ಸರ್ಕಾರದ ಆಡಳಿತ ಮತ್ತು ಸುಧಾರಣಾ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದು, ರಾಜ್ಯ ಚುನಾವಣಾ ಆಯೋಗವು ಮಹಾನಗರ ಪಾಲಿಕೆಗಳು, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಟ್ಟಣ ಪಂಚಾಯ್ತಿಗಳಿಗೆ ಸಾರ್ವತ್ರಿಕ ಚುನಾವಣೆ, ಉಪ ಚುನಾವಣೆಯನ್ನು ನಡೆಸಲು ಆದೇಶಿಸಿದೆ. ಚುನಾವಣಾ ವೇಳಾಪಟ್ಟಿಯಂತೆ ದಿನಾಂಕ 03-09-2021ರ ಶುಕ್ರವಾರದಂದು ಮತದಾನ ನಡೆಯಲಿದೆ.
ಚುನಾವಣೆ ನಡೆಯುತ್ತಿರುವ ಮಹಾನಗರ ಪಾಲಿಕೆಗಳು
ಬೆಳಗಾವಿ
ಹುಬ್ಬಳ್ಳಿ– ಧಾರವಾಡ
ಕಲಬುರ್ಗಿ
ಸಾರ್ವತ್ರಿಕ ಚುನಾವಣೆ ನಡೆಯುತ್ತಿರುವ ನಗರ ಸ್ಥಳೀಯ ಸಂಸ್ಥೆಗಳು
ಬೆಂಗಳೂರು ಗ್ರಾಮಾಂತರ – ದೊಡ್ಡಬಳ್ಳಾಪುರ ನಗರಸಭೆ
ಚಿಕ್ಕಮಗಳೂರು – ತರೀಕೆರೆ ಪುರಸಭೆ
ಬೀದರ್ – ಬೀದರ್ ನಗರಸಭೆ
ಶಿವಮೊಗ್ಗ – ಭದ್ರಾವತಿ ನಗರಸಭೆ
ಉಪ ಚುನಾವಣೆ ನಡೆಯುವ ಮಹಾನಗರ ಪಾಲಿಕೆ
ಮೈಸೂರು – ಮೈಸೂರು ಮಹಾನಗರ ಪಾಲಿಕೆಯ ವಾರ್ಡ್ ನಂ.36
ಉಪ ಚುನಾವಣೆ ನಡೆಯುತ್ತಿರುವ ನಗರ ಸ್ಥಳೀಯ ಸಂಸ್ಥೆಗಳು
ಬಾಗಲಕೋಟೆ – ಮುಧೋಳ ನಗರಸಭೆ, ಬೀಳಗಿ ಪಟ್ಟಣ ಪಂಚಾಯ್ತಿ, ಮಹಾಲಿಂಗಪುರ ಪುರಸಭೆ, ತೇರದಾಳ ಪುರಸಭೆ
ಕೊಡಗು – ವಿರಾಜಪೇಟೆ, ಸೋಮವಾರ ಪೇಟೆ 01, ಸೋಮವಾರಪೇಟೆ 03 ಪಟ್ಟಣ ಪಂಚಾಯ್ತಿ
ಉತ್ತರ ಕನ್ನಡ – ದಾಂಡೇಲಿ ನಗರಸಭೆ
ಕಲಬುರ್ಗಿ – ವಾಡಿ 04, ವಾಡಿ 23 ಪುರಸಭೆ
ಬೀದರ್ – ಬಸವಕಲ್ಯಾಣ 11, ಬಸವಕಲ್ಯಾಣ 23 ನಗರಸಭೆ
ಕೋಲಾರ – ಕೆಜಿಎಫ್ ನಗರಸಭೆ
ದಾವಣಗೆರೆ – ಹರಿಹರ ನಗರಸಭೆ
ಬೆಳಗಾವಿ – ರಾಯಬಾಗ್ ಪಟ್ಟಣ ಪಂಚಾಯ್ತಿ
ಕೊಪ್ಪಳ – ಸವದತ್ತಿ ಪುರಸಭೆ, ಕುಷ್ಟಗಿ ಪುರಸಭೆ
ಗದಗ – ಮುಳುಗುಂದ ಪಟ್ಟಣ ಪಂಚಾಯ್ತಿ
ರಾಮನಗರ – ರಾಮನಗರ ನಗರಸಭೆ
ವಿಜಯಪುರ – ಬಸವನಬಾಗೇವಾಡಿ ಪುರಸಭೆ
PublicNext
31/08/2021 06:22 pm