ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅನುಮಾನದ ಮಾತುಗಳು, ಟೀಕೆ ನನ್ನ ಪಾಲಿಗೆ ಆಶೀರ್ವಾದ: ಸಿಎಂ ಬೊಮ್ಮಾಯಿ

ಬೆಂಗಳೂರು: ನನ್ನ ಬಗೆಗಿನ ಅನುಮಾನದ ಮಾತುಗಳು, ಟೀಕೆ ನನ್ನ ಪಾಲಿಗೆ ಆಶೀರ್ವಾದ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಸಮಾಧಾನ ಹೊರ ಹಾಕಿದ್ದಾರೆ.

ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸಿಎಂ ಬೊಮ್ಮಾಯಿ ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ, "ಇಂದಿನಿಂದ ನವ ಕರ್ನಾಟಕ ನಿರ್ಮಾಣ ಆಗಲಿದೆ. ನಾನಿಂದು ಈ ವೇದಿಕೆ ಮೂಲಕ ಘೋಷಣೆ ಮಾಡುತ್ತಿದ್ದೇನೆ. ಪ್ರಧಾನಿ ಮೋದಿ ನವ ಭಾರತದ ಕನಸಿಗಾಗಿ ಹಲವು ಯೋಜನೆ ತಂದಿದ್ದಾರೆ. ಕೃಷಿಕ್ ಸಮ್ಮಾನ್ ಯೋಜನೆ, ಆಯುಷ್ಮಾನ್ ಭಾರತ್, ಆತ್ಮನಿರ್ಭರ ಭಾರತ, ಸರ್ವಶಿಕ್ಷಣ ಅಭಿಯಾನ, ಸರ್ವರಿಗೂ ಆರೋಗ್ಯದ ಅಭಿಯಾನ ಹೀಗೆ ಹಲವಾರು ಯೋಜನೆಗಳ ಪ್ರಧಾನಿ ಮೋದಿ ನೀಡಿದ್ದಾರೆ. ಪ್ರಧಾನಿ ಮೋದಿ ಅವರ ಕನಸಿನಂತೆ ನಾವೂ ಸಹ ಕರ್ನಾಟಕದಲ್ಲಿ ನವ ಕರ್ನಾಟಕ ನಿರ್ಮಾಣ ಮಾಡಲಿದ್ದೇವೆ" ಎಂದು ತಿಳಿಸಿದರು.

ಕೇವಲ 20 ತಿಂಗಳ ಅವಧಿ ಮಾತ್ರ ನನಗಿದೆ ಎಂಬುವುದು ನನಗೆ ಅರಿವಿದೆ. 20 ತಿಂಗಳಲ್ಲೇ ಫಲಿತಾಂಶ ಕೊಡುವ ಯೋಜನೆಗಳ ಕೊಡುತ್ತೇನೆ. ಜನರ ಸುತ್ತಲೂ ಅಭಿವೃದ್ಧಿ ಇರಬೇಕು, ಅಭಿವೃದ್ಧಿ ಸುತ್ತ ಜನರು ಸುತ್ತುವಂತೆ ಆಗಬಾರದು. ಜನಸ್ನೇಹಿ ಆಡಳಿತವೇ ನನ್ನ ಆದ್ಯತೆ. 20 ತಿಂಗಳ ಅವಧಿ ಇರೋ ಹಿನ್ನೆಲೆಯಲ್ಲಿ ಅಲ್ಪಾವಧಿ ಹಾಗೂ ದೀರ್ಘಾವಧಿ ಯೋಜನೆಗಳ ಪ್ರತ್ಯೇಕವಾಗಿ ರೂಪಿಸುವೆ. ನನ್ನ ಬಗೆಗಿನ ಅನುಮಾನದ ಮಾತುಗಳು, ಟೀಕೆ ನನ್ನ ಪಾಲಿಗೆ ಆಶೀರ್ವಾದ ಎಂದರು.

Edited By : Vijay Kumar
PublicNext

PublicNext

15/08/2021 10:20 am

Cinque Terre

38.73 K

Cinque Terre

1