ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭ್ರಷ್ಟ, ಅಸಮರ್ಥ ನೌಕರರನ್ನು ಮನೆಗೆ ಕಳಿಸಿದ ಯೋಗಿ ಸರ್ಕಾರ

ಲಖನೌ: ಸರ್ಕಾರಿ ಸಂಬಳ ಇದ್ದರೂ ಸರಿಯಾಗಿ ಕೆಲಸ ಮಡದ ಸೋಮಾರಿ ನೌಕರರು ಹಾಗೂ ಭ್ರಷ್ಟ ನೌಕರರನ್ನು ಉತ್ತರ ಪ್ರದೇಶ ಸರ್ಕಾರ ನಿವೃತ್ತಿ ಕೊಟ್ಟು ಸೇವೆಯಿಂದ ಬಿಡುಗಡೆ ಮಾಡಿದೆ.

ಉತ್ತರ ಪ್ರದೇಶದ ಭ್ರಷ್ಟಾಚಾರ ವಿರೋಧಿ ಕಾಯ್ದೆ ಅಡಿಯಲ್ಲಿ ಸುಮಾರು 75ಕ್ಕೂ ಹೆಚ್ಚು ಸರ್ಕಾರಿ ನೌಕರರಿಗೆ ಅವಧಿ ಮುನ್ನವೇ ನಿವೃತ್ತಿ ನೀಡಲಾಗಿದೆ ಎಂದು ಐಎಎನ್ಎಸ್ (indo asian news service) ವರದಿ ಮಾಡಿದೆ.

ಪಂಚಾಯತ್ ರಾಜ್ ಇಲಾಖೆಯ 25 ನೌಕರರು, ಲೋಕೋಪಯೋಗಿ ಇಲಾಖೆಯ 18 ನೌಕರರು, ಕಾರ್ಮಿಕ ಇಲಾಖೆಯ 16 ನೌಕರರು, ಸಾಂಸ್ಥಿಕ ಹಣಕಾಸು ಇಲಾಖೆಯಿಂದ 16 ನೌಕರರು ಹಾಗೂ ವಾಣಿಜ್ಯ ತೆರಿಗೆ ಇಲಾಖೆ ಸೇರಿದಂತೆ ಹಲವಾರು ಇಲಾಖೆಗಳಲ್ಲಿ ನೌಕರರಿಗೆ ಅವಧಿ ಪೂರ್ಣ ನಿವೃತ್ತಿ ನೀಡಲಾಗಿದೆ.

ಉಳಿದಂತೆ ಸರ್ಕಾರಿ ಕೆಲಸದ ಮೇಲೆ ವಿದೇಶಕ್ಕೆ ಹೋಗಿ ಕೆಲಸ ಮುಗಿದ ನಂತರವೂ ಕೆಲ ದಿನ ಅಲ್ಲಿಯೇ ಇದ್ದ ಐವರು ಐಎಎಸ್ ಅಧಿಕಾರಿಗಳ ಮೇಲೂ ಯೋಗಿ ಸರ್ಕಾರ ಕ್ರಮಕ್ಕೆ ಮುಂದಾಗಿದೆ.

Edited By : Nagaraj Tulugeri
PublicNext

PublicNext

10/01/2021 04:38 pm

Cinque Terre

110.39 K

Cinque Terre

20

ಸಂಬಂಧಿತ ಸುದ್ದಿ