ಬೆಂಗಳೂರು: ರಾತ್ರೋರಾತ್ರಿ 142 ಪೊಲೀಸ್ ಇನ್ಸ್ಪೆಕ್ಟರ್ಗಳ ವರ್ಗಾವಣೆ ಮಾಡಿರುವುದಕ್ಕೆ ಬಿಜೆಪಿ ಶಾಸಕರು ಫುಲ್ ಗರಂ ಆಗಿದ್ದಾರೆ.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಈ ನಿರ್ಧಾರಕ್ಕೆ ಅವರದೇ ಪಕ್ಷದ ಶಾಸಕರು ಅಸಮಾಧಾನ ಹೊರ ಹಾಕಿದ್ದಾರೆ. ''ಮನಬಂದಂತೆ ಇನ್ಸ್ಪೆಕ್ಟರ್ಗಳ ವರ್ಗಾವಣೆ ಮಾಡುವುದು ಸರಿಯಲ್ಲ. ಇದು ವರ್ಗಾವಣೆ ಸಮಯ ಅಲ್ಲದಿದ್ದರೂ ಇಂತಹ ನಿರ್ಧಾರ ಕೈಗೊಂಡಿದ್ದಾರೆ'' ಎಂದು ಕಿಡಿಕಾರಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.
PublicNext
10/01/2021 08:22 am