ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತರಾತುರಿಯಲ್ಲಿ ಬಂದು ʻಅಮಿತ್ ಶಾ'ಗೆ ಪಾದರಕ್ಷೆ ಎತ್ತಿಕೊಟ್ಟ ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ!

ಹೈದರಾಬಾದ್: ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅವರು ಭಾನುವಾರ ಸಿಕಂದರಾಬಾದ್‌ನ ಶ್ರೀ ಉಜ್ಜೈನಿ ಮಹಾಂಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಅವರ ಪಾದರಕ್ಷೆಗಳನ್ನು ಎತ್ತಿಕೊಟ್ಟಿದ್ದಾರೆ. ಇದೀಗ ಅದರ ವಿಡಿಯೋ ಎಲ್ಲೆಡೆ ವೈರಲ್‌ ಆಗಿದ್ದು, ತೀವ್ರ ಟೀಕೆಗೆ ಕಾರಣವಾಗಿದೆ.

ಸಂಜಯ್ ಅವರ ಕ್ರಮಕ್ಕೆ ಪ್ರತಿಕ್ರಿಯಿಸಿದ ಟಿಆರ್‌ಎಸ್ ಕಾರ್ಯಾಧ್ಯಕ್ಷ ಕೆಟಿ ರಾಮರಾವ್ ಅವರು ಗುಜರಾತ್ ಮತ್ತು ನವದೆಹಲಿಯ ನಾಯಕರ ಮುಂದೆ ತೆಲಂಗಾಣದ ಸ್ವಾಭಿಮಾನವನ್ನು ಅಡಮಾನ ಇಟ್ಟಿದ್ದಾರೆ ಎಂದು ಟ್ವೀಟ್‌ನಲ್ಲಿ ಟೀಕಿಸಿದ್ದಾರೆ. ಅಂತಹ ನಾಯಕರ ಕಾರ್ಯಗಳನ್ನು ತೆಲಂಗಾಣವು ಸೂಕ್ಷ್ಮವಾಗಿ ಗಮನಿಸುತ್ತಿದೆ.

ಅಂತಹ ನಾಯಕರ ಪ್ರಯತ್ನಗಳನ್ನು ತೆಲಂಗಾಣ ಸಮಾಜವು ವಿಫಲಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ. ವೀಡಿಯೊದಲ್ಲಿ, ಸಂಜಯ್ ಅವರು ದೇವಾಲಯದಿಂದ ಹೊರಬಂದ ನಂತರ ಶಾ ಅವರ ಪಾದರಕ್ಷೆಗಳನ್ನು ತರಾತುರಿಯಲ್ಲಿ ತೆಗೆದುಕೊಂಡು ಶಾ ಕಾಲಿಗೆ ಹಾಕಿಕೊಳ್ಳಲು ಅನುವು ಮಾಡಿಕೊಡುತ್ತಿರುವುದನ್ನು ನೋಡಬಹುದು.

Edited By : Abhishek Kamoji
PublicNext

PublicNext

22/08/2022 06:10 pm

Cinque Terre

78.75 K

Cinque Terre

7

ಸಂಬಂಧಿತ ಸುದ್ದಿ