ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅನುಶ್ರೀ ಪ್ರಕರಣದ ಮಾಜಿ ಸಿಎಂ ಯಾರೆಂದು ಬಹಿರಂಗಪಡಿಸಿ- ಎಚ್‍ಡಿಕೆ ಕಿಡಿ

ಬೆಂಗಳೂರು: ನಿರೂಪಕಿ, ನಟಿ ಅನುಶ್ರೀ ಪ್ರಕರಣದಲ್ಲಿ 'ಮಾಜಿ ಸಿಎಂ' ಹೆಸರು ಪ್ರಸ್ತಾಪವಾಗಿದೆ. ಈ ಹಿನ್ನೆಲೆಯಲ್ಲಿ ಯಾರು ಆ ಮಾಜಿ ಸಿಎಂ ಎನ್ನುವುದನ್ನು ಬಹಿರಂಗಪಡಿಸಿ ಎಂದು ಜೆಡಿಎಸ್ ಮುಖಂಡ ಎಚ್‌.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ನಗರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ನಾನಂತೂ ತನಿಖೆಗೆ ಒತ್ತಾಯಿಸುತ್ತೇನೆ. ಯಾರು ಆ ಮಾಜಿ ಸಿಎಂ ಕರೆ ಮಾಡಿದ್ದು? ಎನ್ನುವ ಬಗ್ಗೆ ತನಿಖೆ ಆಗಲಿ. ಈ ಬಗ್ಗೆ ಸಿಎಂ, ಗೃಹ ಸಚಿವರಿಗೆ ಪತ್ರ ಬರೆದು ತನಿಖೆಗೆ ಒತ್ತಾಯಿಸುತ್ತೇನೆ. ಎಲ್ಲವೂ ತನಿಖೆಯಿಂದ ಬಹಿರಂಗವಾಗಲಿ" ಎಂದು ಕಿಡಿಕಾರಿದ್ದಾರೆ.

ನಿರೂಪಕಿ ಅನುಶ್ರೀ ಅವರಿಗೆ ಮಾಜಿ ಸಿಎಂ ಒಬ್ಬರು ಕರೆ ಮಾಡಿದ್ದರು ಎಂಬುದಾಗಿ ಸುದ್ದಿ ಬರುತ್ತಿದೆ. ನಾನು, ಎಸ್.ಎಂ.ಕೃಷ್ಣಾ, ಜಗದೀಶ್ ಶೆಟ್ಟರ್, ಸಿದ್ದರಾಮಯ್ಯ ಸೇರಿದಂತೆ 6 ಮಂದಿ ಮಾಜಿ ಮುಖ್ಯಮಂತ್ರಿಗಳಿದ್ದಾರೆ. ಯಾರು ಆ ಮಾಜಿ ಸಿಎಂ ಎಂಬುದಾಗಿ ಬಹಿರಂಗವಾಗಲಿ. ಅನುಶ್ರೀಗೆ ಕರೆ ಮಾಡಿದಂತ ಮಾಜಿ ಸಿಎಂ ಯಾರು ಎನ್ನುವುದು ಬಹಿರಂಗವಾಗಲಿ ಎಂದರು.

Edited By : Vijay Kumar
PublicNext

PublicNext

03/10/2020 04:56 pm

Cinque Terre

102.57 K

Cinque Terre

3

ಸಂಬಂಧಿತ ಸುದ್ದಿ