ಕೊಪ್ಪಳ: ಪ್ರತಿಯೊಬ್ಬರಿಗೂ ಡ್ರಗ್ಸ್ ಅವಶ್ಯಕತೆ ಇದೆ ಎಂದು ಕಾಂಗ್ರೆಸ್ ಶಾಸಕ ಅಮರೇಗೌಡ ಬಯ್ಯಾಪುರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಶಾಸಕರು, ರಾಜಮಹಾರಾಜರ ಕಾಲದಿಂದಲೂ ನಶೆ ಮಾಡುವ ಪದ್ಧತಿ ಬಂದಿದೆ. ಡ್ರಗ್ಸ್ ಕೂಡ ಒಂದು ನಶೆ ಕೊಡುವ ವಸ್ತು. ಈಗ ಬೇರೆ ಬೇರೆ ವೆರೈಟಿ ನಶೆ ಮಾಡುವ ವಸ್ತುಗಳು ಕಂಡು ಹಿಡಿದಿದ್ದಾರೆ. ಸಮಾಜದಲ್ಲಿ ಒಳ್ಳೆಯ ಸಂದೇಶ ಕೊಡುವ ಸಿನಿಮಾ ಮಾಡಿ ಈಗ ಅದೇ ನಟಿಯರು ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದು ತಪ್ಪು. ಯಾವುದೇ ಮಾಧ್ಯಮದವರು ಇದನ್ನು ಪ್ರಸಾರ ಮಾಡಬಾರದು. ಅವರಿಗೆ ಅಂಜಿಕೆ ಆಗಬೇಕು. ಗೌಪ್ಯವಾಗಿ ಶಿಕ್ಷೆ ನೀಡಬೇಕು ಎಂದು ಹೇಳಿದ್ದಾರೆ.
ಮನುಷ್ಯರು ನಶೆಗೆ ದಾಸನಾಗೋದು ಸಹಜ. ತಿಳುವಳಿಕೆ ಇದ್ದವರು ಕಡಿಮೆ ಮಾಡುತ್ತಾರೆ, ತಿಳುವಳಿಕೆ ಇಲ್ಲದವರು ಹೆಚ್ಚು ಮಾಡುತ್ತಾರೆ. ನಾನಂತು ಅಫೀಮು, ಸಿಗರೇಟು ಸೇದುವವನಲ್ಲ. ಯಾವ ಕ್ಲಬ್‌ಗೂ ಹೋಗುವವನಲ್ಲ, ನನ್ನದೇನಾದರೂ ಇದ್ದರೆ ಹೊರಹಾಕಿ ಎಂದು ಸವಾಲು ಹಾಕಿದರು.
PublicNext
03/10/2020 03:50 pm