ಕೇರಳದ: ಕಾಳಿ ದೇವಿಯ ಕೈಯಲ್ಲಿ ಸಿಗರೇಟ್ ಕೊಟ್ಟು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ಡೈರೆಕ್ಟರ್ ಲೀನಾ ಮಣಿಮೇಕಲೈ, ಈಗ ಮತ್ತೆ ಎಲ್ಲರ ಸಿಟ್ಟಗೆ ಗುರಿ ಆಗಿದ್ದಾರೆ.
ಹೌದು. ಡೈರೆಕ್ಟರ್ ಲೀನಾ ಈಗ ಕಾಳಿ ಪೋಸ್ಟರ್ ಸಂಬಂಧಿಸಿದಂತೆ ಹೇಳಿಕೆ ಕೊಟ್ಟಿದ್ದಾರೆ. "ನನ್ನ ಕಾಳಿ ಹಿಂದೂತ್ವವನ್ನ ಕಿತ್ತೊಗೆಯುತ್ತಾಳೆ.
ಈಕೆ ಬಂಡವಾಳಶಾಹಿಗಳನ್ನ ಕಿತ್ತೊಗೆಯುತ್ತಾಳೆ. ಈಕೆ ವಿಲಕ್ಷಣವಾದರೂ ಸ್ವತಂತ್ರ ಮನೋಭಾವದ ಚೇತನ. ತನ್ನ ಸಾವಿರ ಕೈಗಳಿಂದಲೇ ಎಲ್ಲವನ್ನೂ ಕಿತ್ತೊಗೆಯುತ್ತಾಳೆ ಎಂದು ಲೀನಾ ಈಗ ಬರೆದುಕೊಂಡಿದ್ದಾರೆ. ಇದೇ ಈಗ ಜನರನ್ನ ಸಿಟ್ಟಿಗೆಬ್ಬಿಸಿದೆ.
PublicNext
09/07/2022 02:09 pm