ದೆಹಲಿ: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನ ಮೀಟ್ ಆಗಿದ್ದಾರೆ. ಕಲೆ,ಸಂಸ್ಕೃತಿ, ಸಾಮಾಜಿಕ ಚಟುವಟಿಕೆಗಳ ಬಗ್ಗೆ ಮಾತನಾಡಿದರು.
ಹೌದು. ಬರೋಬ್ಬರಿ 13 ವರ್ಷಗಳ ಬಳಿಕ ಕಿಚ್ಚು ಸುದೀಪ್ ದೆಹಲಿಗೆ ಭೇಟಿಕೊಟ್ಟಿದ್ದಾರೆ. ವಿವಿಧ ವಿಚಾರಗಳ ಬಗ್ಗೆನೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಜೊತೆಗೆ ಚರ್ಚಿಸಿದ್ದಾರೆ.
ಈ ಒಂದು ವಿಶೇಷ ಭೇಟಿಯನ್ನ ಸ್ವತಃ ಪ್ರಹ್ಲಾದ್ ಜೋಶಿ ಅವ್ರು ತಮ್ಮ ಫೇಸ್ ಬುಕ್ ಪೇಜ್ ಅಧಿಕೃತ ಖಾತೆಯಲ್ಲಿ ಫೋಟೋ ಸಮೇತ ಹಂಚಿಕೊಂಡಿದ್ದಾರೆ.
ಬಹು ಭಾಷೆಯಾ ನಟರಾಗಿ ಮಿಂಚುತ್ತಿರೋ ಸುದೀಪ್ ಅವ್ರು ಸಿನಿಮಾರಂಗದಲ್ಲಿ ಮತ್ತಷ್ಟು ಬೆಳೆಯಲಿ ಅಂತಲೂ ಪ್ರಹ್ಲಾದ್ ಜೋಶೀ ಹಾರೈಸಿದ್ದಾರೆ.
PublicNext
17/07/2022 08:53 am