ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಮರ್ಜೆನ್ಸಿ ಚಿತ್ರದಲ್ಲಿ ಕಂಗನಾ "ಇಂದಿರಾ ಗಾಂಧಿ" ಪಾತ್ರ ಮಾಡ್ತವ್ರೆ !

ಮುಂಬೈ: ಬಾಲಿವುಡ್‌ ನ ನಾಯಕಿ ನಟಿ ಕಂಗಣಾ ರಾಣಾವುತ್ ಮತ್ತೊಮ್ಮೆ ಡೈರೆಕ್ಷನ್‌ಗೆ ಇಳಿದಿದ್ದಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರವನ್ನ ಅಭಿನಯಿಸೋ ಮೂಲಕ ತಮ್ಮ ಈ ಚಿತ್ರವನ್ನ ತಾವೇ ಡೈರೆಕ್ಟ್ ಕೂಡ ಮಾಡ್ತಿದ್ದಾರೆ.

ಹಾಗೆ ರೆಡಿ ಆಗ್ತಿರೋ ಈ ಚಿತ್ರದ ಹೆಸರು ಎಮರ್ಜೆನ್ಸಿ. ಈಗ ಈ ಚಿತ್ರದ ಫಸ್ಟ್ ಲುಕ್ ರಿವೀಲ್ ಆಗಿದೆ.

ಕಂಗನಾ ರಾಣಾವುತ್ ತಮ್ಮ ಈ ಚಿತ್ರಕ್ಕೆ ಹಾಲಿವುಡ್ ಮೇಕ್‌ಅಪ್‌ ಮ್ಯಾನ್ ಡೇವಿಡ್ ಮಾಲಿನೋವ್ಸ್ಕಿಯನ್ನ ಕರೆತಂದಿದ್ದು, ಈ ಆಸ್ಕರ್ ವಿನ್ನರ್ ಮೇಕ್‌ ಅಪ್ ಮ್ಯಾನಿಂದಲೇ ಇಂದಿರಾ ಗಾಂಧಿ ಪಾತ್ರವಾಗಿ ರೂಪಗೊಂಡಿದ್ದಾರೆ.

ವಿಶೇಷವೆಂದ್ರೆ ಕಂಗನಾ ಈ ಚಿತ್ರದಲ್ಲಿ ಅಭಿನಯ ಮಾಡ್ತಿದ್ದಾರೆ. ನಿರ್ದೇಶನ ಮಾಡ್ತಿದ್ದಾರೆ. ಜೊತೆಗೆ ಇವರೇ ಈ ಚಿತ್ರಕ್ಕೆ ಬಂಡವಾಳ ಹೂಡಿದಿದ್ದಾರೆ ಅನ್ನೋದೇ ವಿಶೇಷ. ವೇಟ್ ಮಾಡಿ ಸಿನಿಮಾ ಹೇಗೆ ಬರುತ್ತೆ ಅಂತ ನೋಡೋಣ. ಅಂದ್ಹಾಗೆ ಕಂಗನಾ ಈ ಹಿಂದೆ ತಮ್ಮ ಅಭಿನಯದ ಮಣಿಕರ್ಣಿಕಾ ಚಿತ್ರವನ್ನೂ ಡೈರೆಕ್ಟ್ ಮಾಡಿದ್ರು. ಈ ಮೂಲಕ ಈಗ ಎರಡನೇ ಬಾರಿ ಡೈರೆಕ್ಷನ್ ಮಾಡ್ತಿದ್ದಾರೆ.

Edited By :
PublicNext

PublicNext

14/07/2022 12:28 pm

Cinque Terre

80.77 K

Cinque Terre

13