ಮುಂಬೈ:ಬಾಲಿವುಡ್ ನಟಿ ಕಂಗನಾ ರಾಣಾವುತ್ ಈಗ ಮತ್ತೆ ಉದ್ದವ್ ಠಾಕ್ರೆ ವಿರುದ್ಧ ಸಿಟ್ಟು ಹೊರ ಹಾಕಿದ್ದಾರೆ.ಹನುಮಾನ್ ಚಾಲೀಸಾ ಬ್ಯಾನ್ ಮಾಡಲು ಹೊರಟ್ಟಿದ್ರಿ ಅಲ್ವೇ. ನೋಡಿ ಈಗ ಹೇಗ್ ಆಗಿದೆ ಅಂತಲೇ ನೇರವಾಗಿಯೇ ಉದ್ದವ್ ಠಾಕ್ರೆಗೆ ಚುಚ್ಚಿದ್ದಾರೆ.
ಕಂಗನಾ ಹೀಗೆ ಉದ್ದವ್ ಠಾಕ್ರೆ ಮೇಲೆ ಕೆಂಡಕಾರಲು ಕಾರಣವೂ ಇದೆ. ಕಳೆದ ವರ್ಷ ಉದ್ಧವ್ ಠಾಕ್ರೆ ಸೂಚನೆ ಮೇರೆಗೇನೆ ಕಂಗನಾ ರಾಣಾವುತ್ ಕಚೇರಿ ಮಣಿಕರ್ಣಿಕಾವನ್ನ ನೆಲಸಮಗೊಳಿಸಲಾಗಿತ್ತು.
ಇದರ ವಿರುದ್ಧ ಕಂಗನಾ ಅಂದೇ ಆಕ್ರೋಶ ವ್ಯಕ್ತಪಡಿಸಿದ್ದರು.ಇಂದು ನನ್ನ ಮನೆ ಮುರಿದಿದೆ. ನಾಳೆ ನಿಮ್ಮ ಹಂಕಾರವೂ ಮುರಿಯುತ್ತದೆ ಎಂದು ನೇರವಾಗಿ ಟ್ವಿಟರ್ ನಲ್ಲಿ ಕಂಗನಾ ಹೇಳಿ ಬಿಟ್ಟಿದ್ದರು.
ಆದರೆ, ಈಗ ಉದ್ದವ್ ಠಾಕ್ರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದಂತೇನೆ, ಕಂಗನಾ ಮತ್ತೆ ಟ್ವಿಟರ್ ಮೂಲಕ ಕಾಮೆಂಟ್ ಮಾಡಿದ್ದಾರೆ. ಹನುಮಾನ್ ಚಾಲೀಸಾ ಬ್ಯಾನ್ ಮಾಡಲು ಹೊರಟ್ಟಿದ್ದೀರಿ ಅಲ್ವೆ.ಹನುಮಂತ ಶಿವನ 12ನೇ ಅವತಾರ ಎಂದು ಹೇಳಲಾಗುತ್ತದೆ. ಶಿವಸೇನೆ ಹನುಮಾನ್ ಚಾಲೀಸಾ ಬ್ಯಾನ್ ಮಾಡಲು ಹೋದ್ರೆ, ಸ್ವತಃ ಶಿವನೂ ಅವರನ್ನ ಕಾಪಾಡೋದಿಲ್ಲ ಎಂದು ಹೇಳಿ ಹರ..ಹರ ಮಹಾದೇವ ಎಂದು ಕಂಗನಾ ಹೇಳಿಕೊಂಡಿದ್ದಾರೆ.
PublicNext
30/06/2022 05:26 pm