ಜೈಪುರ: ರಾಜಸ್ತಾನದ ಪ್ರತಿಷ್ಠಿತ ವಿಶ್ವವಿದ್ಯಾಲಯೊಂದರಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ ನಡೆದಿದೆ. ಚುನಾವಣೆಯಲ್ಲಿ ಸ್ಪರ್ಧಿಸಿದ್ದ ವಿದ್ಯಾರ್ಥಿಗಳು ತಮ್ಮ ಗೆಲುವಿಗಾಗಿ ಸ್ನೇಹಿತರ ಕಾಲಿಗೆ ಬಿದ್ದಿದ್ದಾರೆ. ವಿವಿ ಕ್ಯಾಂಪಸ್ ಆವರಣದಲ್ಲಿ ನನಗೆ ವೋಟ್ ಹಾಕಿ ಎಂದು ಕಂಡ ಕಂಡವರ ಕಾಲಿಗೆ ಬಿದ್ದು ಬೇಡಿಕೊಳ್ಳುವ ವಿಡಿಯೋ ಒಂದು ಭಾರಿ ವೈರಲ್ ಆಗಿದೆ.
ಭವಿಷ್ಯದ ರಾಷ್ಟ್ರದ ರಾಜಕಾರಣಕ್ಕೆ ವಿದ್ಯಾರ್ಥಿ ಸಂಘದ ಚುನಾವಣೆ ಪೂರಕ ಆಗಿರುತ್ತವೆ. ವಿದ್ಯಾರ್ಥಿ ದಿಸೆಯಲ್ಲಿ ವೋಟ್‌ಗಾಗಿ ಕಾಲಿಗೆ ಬೀದ್ದು ಬೇಡಿಕೊಳ್ಳುವ ಪರಿ ನೋಡಿದ್ರೆ ರಾಜಕಾರಣ ಎತ್ತ ಸಾಗುತ್ತಿದೆ ಎನ್ನುವ ಪ್ರಶ್ನೆಗಳು ಉದ್ಭವಿಸುತ್ತಿವೆ.
PublicNext
26/08/2022 04:35 pm