ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಳವರ ಕುಟುಂಬದ ಮಕ್ಕಳಿಗೆ ಶಾಲೆಗೆ ಸೇರಿಸಿದ ಶಾಸಕ ಎಚ್.ಕೆ.ಪಾಟೀಲ್

ಗದಗ : ಕುಟುಂಬದ ವಂಶವೃಕ್ಷವನ್ನು ಬರೆದಿಟ್ಟುಕೊಂಡು ಪ್ರತಿ ವರ್ಷ ಅವರ ಮನೆಗೆ ತೆರಳಿ ಅವರಿಗೆ ತಿಳಿಸುವ ಹೆಳವರ ಕುಟುಂಬದ ಮಕ್ಕಳು ತಂದೆ ತಾಯಿಯ ನಿರಂತರ ವಲಸೆಯಿಂದ ಶಿಕ್ಷಣದಿಂದ ವಂಚಿತರಾಗುತ್ತಿದ್ದು ಅದನ್ನು ತಪ್ಪಿಸುವ ನಿಟ್ಟಿನಲ್ಲಿ ಗದಗ ಶಾಸಕ ಎಚ್.ಕೆ.ಪಾಟೀಲ ವಿಶಿಷ್ಟ ಹೆಜ್ಜೆ ಇಟ್ಟಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಮೆಚ್ಚುಗೆಗೆ ಕಾರಣವಾಗಿದೆ.

ತಮ್ಮದೇಯಾದ ವಿಶಿಷ್ಟ ದಾಟಿಯಲ್ಲಿ ವಂಶ ವಾಹಿನಿ ಹೇಳುವ ಹೆಳವರ ಕುಟುಂಬಗಳು ಗದಗ ತಾಲೂಕಿನ ಹುಲಕೋಟಿ ಗ್ರಾಮದಲ್ಲಿ ಕಳೆದ 20 ದಿನಗಳಿಂದ ಪ್ರತಿ ವರ್ಷದಂತೆ ಬಂದು ವಾಸವಿದ್ದು ಇವರ ಮಕ್ಕಳನ್ನು ಶಾಲೆಗೆ ದಾಖಲಿಸಿ ಮಕ್ಕಳ ಇತಿಹಾಸ ಬರೆಯುವತ್ತ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಯೋಗದಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.

ಹುಲಕೋಟಿ ಕೃಷ್ಣಾ ಕಾಲನಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಧಾನ ಗುರುಗಳಾದ ಎ.ವಿ.ಪ್ರಭು ಹೆಳವರ ಟೆಂಟುಗಳಿಗೆ ಭೇಟಿ ನೀಡಿ, ಶಿಕ್ಷಣದ ಮಹತ್ವವನ್ನು ಹೆಳವರಿಗೆ ತಿಳಿಸಿ ಅವರ ಮನವಲಿಸಿ ಮಕ್ಕಳನ್ನು ಶಾಲೆಗೆ ಕಳುಹಿಸಿಕೊಡುವಂತೆ ವಿನಂತಿಸಿದಾಗ ಹೆಳವರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿಕೊಡಲು ಒಪ್ಪಿಗೆ ನೀಡಿದ್ದಾರೆ.

ಶಾಲಾ ಪರಿಕರಗಳಿಗೆ ವ್ಯವಸ್ಥೆ:

ಹೆಳವರ ಮಕ್ಕಳಿಗೆ ಉಚಿತವಾಗಿ ಹಾಗೂ ದಾನಿಗಳಿಂದ ಬಟ್ಟೆ, ಶಾಲಾ ಬ್ಯಾಗ, ಲೇಖನ ಸಾಮಗ್ರಿಗಳು, ಟೈ,ಬೆಲ್ಟ, ಕೊಡಿಸುವ ವ್ಯವಸ್ಥೆಯನ್ನು ಮಾಡಲಾಗಿದೆ.ಅವರಿಗೆ ದಿನಾಲು ಹಾಲು ಬಿಸಿಊಟದ ಸೌಲಭ್ಯವನ್ನು ಸ್ಥಳೀಯ ಆಡಳಿತ ಮಂಡಳಿಗಳು ಸಹಯೋಗದಲ್ಲಿ ವ್ಯವಸ್ಥೆ ಮಾಡಲು ಶಾಸಕ ಎಚ್.ಕೆ.ಪಾಟೀಲ ವ್ಯವಸ್ಥೆ ಮಾಡಿದ್ದಾರೆ.

ವಲಸೆ ಕಾರ್ಡಿನ ವ್ಯವಸ್ಥೆ:

ಹೆಳವರು ಅಲೆಮಾರಿಗಳಾಗಿದ್ದು ತಮ್ಮ ಜೀವನಕ್ಕಾಗಿ ಊರು ಊರು ಅಲೆದು ಆಯ್ದ ಕುಟುಂಬಗಳ ವಂಶವೃಕ್ಷವನ್ನು ಬರೆದು ವರ್ಷದಲ್ಲಿ ಒಮ್ಮೆ ಅವರ ಮನೆಗೆ ತೆರಳಿ ವಂಶವೃಕ್ಷವನು ಓದಿ ಮನೆಯ ಯಜಮಾನರು ನೀಡುವ ದಾನ್ಯಗಳು, ಹಣವನ್ನು ಪಡೆದು ಕಡತಗಳನ್ನು ಹೊತ್ತುಕೊಂಡು ಊರು ಊರು ತಿರುಗವ ಹೇಳವರ ಮಕ್ಕಳ ಶಿಕ್ಷಣಕ್ಕಾಗಿ ಶಿಕ್ಷಣ ಇಲಾಖೆಯೂ ಅವರು ತೆರಳುವ ಊರುಗಳ ಶಾಲೆಯಲ್ಲಿಯೇ ಶಿಕ್ಷಣ ಪಡೆಯಲು, ಸೌಲಬ್ಯಗಳನ್ನು ಪಡೆಯಲು ವಲಸೆ ಕಾರ್ಡಿನ ವ್ಯವಸ್ಥೆಯನ್ನು ಮಾಡಲಾಗಿದೆ.

Edited By : Shivu K
PublicNext

PublicNext

31/07/2022 08:27 pm

Cinque Terre

46.04 K

Cinque Terre

0