ಮೈಸೂರು: ಶಾಲಾ ಮಕ್ಕಳಿಗೆ ಆರ್‌ಎಸ್‌ಎಸ್ ಸರ್ಕಾರ ಏನೇನು ಕಲಿಸುತ್ತೋ ಕಲಿಸಲಿ. ಅದಕ್ಕೆ ಪರ್ಯಾಯವಾಗಿ ನಾವು ಮಕ್ಕಳಿಗೆ ಸಂವಿಧಾನ ಪಾಠ ಕಲಿಸಲು ಪರ್ಯಾಯ ಪಠ್ಯ ಕಾರ್ಯಕ್ರಮ ರೂಪಿಸುತ್ತೇವೆ. ಈ ಮೂಲಕ ಆಗಿರುವ ತಪ್ಪುಗಳನ್ನು ಸರಿಪಡಿಸುತ್ತೇವೆ ಎಂದು ಹಿರಿಯ ಸಾಹಿತಿ ದೇವನೂರು ಮಹಾದೇವ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಠ್ಯ ಪರಿಷ್ಕರಣೆಯಿಂದ ಆಗಿರುವ ತಪ್ಪುಗಳನ್ನು ಸರಿಪಡಿಸಲು, ಮಕ್ಕಳು ಪ್ರಜಾಸತ್ತಾತ್ಮಕವಾಗಿ ಬೆಳೆಯಲು, ಸಂವಿಧಾನದ ಆಶಯಗಳನ್ನು ತಿಳಿಯಲು ಪರ್ಯಾಯವಾಗಿ ಕಾರ್ಯಕ್ರಮ ರೂಪಿಸಲಾಗುತ್ತದೆ. ಮಕ್ಕಳು ಈಗಾಗಲೇ ಬಳಸುತ್ತಿರುವ ವ್ಯಾಟ್ಸಾಪ್, ಫೇಸ್ಬುಕ್ ಮೂಲಕ ಪಠ್ಯ ಪರಿಷ್ಕರಣೆಯಲ್ಲಾಗಿರುವ ತಪ್ಪುಗಳನ್ನು ಸರಿಪಡಿಸುತ್ತೇವೆ. ವಿದ್ಯಾರ್ಥಿಗಳು ಸಂವಿಧಾನವನ್ನು ಮರೆಯುತ್ತಿದ್ದಾರೆ. ಭವಿಷ್ಯದ ಪೀಳಿಗೆ ಮೂಢನಂಬಿಕೆಗಳಿಗೆ ಜೋತು ಬೀಳದೆ ವೈಜ್ಞಾನಿಕ ಮನೋಭಾವನೆಯನ್ನು ಹೊಂದಿ ಜಾತ್ಯಾತೀತವಾಗಿರಬೇಕು. ಸಂವಿಧಾನದ ಪ್ರಸ್ತಾವನೆಯನ್ನು ಹಾಡು ಕಟ್ಟಿ ಹಾಡಲಿದ್ದೇವೆ. ತಜ್ಞರ ಮೂಲಕ ಉಪನ್ಯಾಸ ಏರ್ಪಡಿಸುತ್ತೇವೆ. ಕಮ್ಮಟ ಮಾಡಿ ಪ್ರಶ್ನಿಸುವ, ವೈಜ್ಞಾನಿಕ ಮನೋಭಾವ ಬೆಳೆಸಲಿದ್ದೇವೆ ಎಂದು ಹೇಳಿದರು.
PublicNext
26/05/2022 07:38 pm