ಬೆಂಗಳೂರು: ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆ ಅಳವಡಿಕೆ ವಿಷಯ ಭಾರೀ ಸಂಚಲನ ಸೃಷ್ಟಿಸಿತ್ತು. ವಿರೋಧ ಪಕ್ಷಗಳಿಗೂ ಇದು ವಿರೋಧಿಸೋಕೆ ಆಹಾರ ಆಗಿತ್ತು. ಈಗ ಈ ವಿಷಯಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಹತ್ವದ ನಿರ್ಧಾರವೊಂದನ್ನ ಹೇಳಿ ಬಿಟ್ಟಿದ್ದಾರೆ.
ಹೌದು. ಶಾಲಾ ಪಠ್ಯ ಕ್ರಮದಲ್ಲಿ ಈ ವರ್ಷದಿಂದಲೇ ಭಗವದ್ಗೀತ ಅಳವಡಿಸೋ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ವಿವರಿಸಿದ್ದು, ಭಗವದ್ಗೀತೆ ನೈತಿಕ ಶಿಕ್ಷಣದ ಭಾಗವಾಗಿಯೇ ಅಷ್ಟೇ ಇರಲಿದೆ. ಆದರೆ, ಇದು ಪರೀಕ್ಷೆಯಲ್ಲಿ ಇರೋದಿಲ್ಲ ಅಂತಲೇ ತಿಳಿಸಿದ್ದಾರೆ.
ಪಠ್ಯದಲ್ಲಿ ನೈತಿಕ ಶಿಕ್ಷಣವನ್ನ ಸೇರಿಸಲೇಬೇಕು ಅಂತಲೇ ಸಾಕಷ್ಟು ಬೇಡಿಕೆಗಳು ಬಂದಿವೆ. ಈ ಕಾರಣಕ್ಕೇನೆ ಮಹಾಭಾರತ,ಪಂಚತಂತ್ರ,ರಾಮಾಯಣ, ಹೀಗೆ ಮಾರಲ್ ಸೈನ್ಸ್ ಅಂಶಗಳನ್ನ ಕೂಡ ಪಠ್ಯದಲ್ಲಿ ಸೇರಿಸುತ್ತೇವೆ ಅಂತಲೇ ಹೇಳಿದ್ದಾರೆ ಬಿ.ಸಿ.ನಾಗೇಶ್.
PublicNext
19/04/2022 12:47 pm