ಮಂಡ್ಯ : ರಾಜ್ಯದಲ್ಲಿ ಹಿಜಾಬ್ ವಿವಾದ ಭುಗಿಲೆದ್ದಿದೆ. ಇದರ ಮಧ್ಯೆ ಮೊನ್ನೆ ಮಂಡ್ಯದ ಕಾಲೇಜೊಂದರಲ್ಲಿ ಹಿಜಾಬ್ ಧಾರಿ ವಿದ್ಯಾರ್ಥಿನಿಯೋರ್ವಳು ಕೇಸರಿ ಶಾಲು ವಿದ್ಯಾರ್ಥಿಗಳ ಮುಂದೆ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದಕ್ಕೆ ಮುಸ್ಲಿಂ ಮುಖಂಡರು ಅವಳಿಗೆ ಗಿಫ್ಟ್ ಹೊಳೆಯನ್ನೇ ಹರಿಸಿದ್ದಾರೆ.
ಇಂದು ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಇಬ್ರಾಹಿಂ ಕೂಡಾ ವಿದ್ಯಾರ್ಥಿನಿ ಮನೆಗೆ ಭೇಟಿ ನೀಡಿದ್ದಾರೆ. ಇದೇ ವೇಳೆ ಮಾಧ್ಯಮಗಳ ಮುಂದೆ ಮಾತನಾಡಿದ ಅವರು ವಿದ್ಯಾರ್ಥಿನಿ ಮುಸ್ಕಾನ್ ಗೆ ಉಡುಗೊರೆ ಕೊಟ್ಟರೆ ತಪ್ಪೇನು? ಆಕೆಯನ್ನ ಮೆಚ್ಚಿ ಉಡುಗೊರೆ ಕೊಟ್ಟಿರಬಹುದು ಅದರಲ್ಲಿ ತಪ್ಪಿಲ್ಲ ಎಂದಿದ್ಧಾರೆ.
ಮುಸ್ಕಾನ್ ಅಷ್ಟು ಹುಡುಗರ ಎದುರು ಏಕಾಂಗಿಯಾಗಿ ಮಾತನಾಡಿದ್ದಾಳೆ. ಹಾಗಾಗಿ ಆಕೆಯನ್ನ ಮೆಚ್ಚಿ ಉಡುಗೊರೆ ಕೊಟ್ಟರೇ ಯಾವುದೇ ತಪ್ಪಿಲ್ಲ. ಮುಂದಿನ ಚುನಾವಣೆಗೆ ಹೋಗಲು ಬಿಜೆಪಿಯವರಿಗೆ ಯಾವ ವಿಚಾರವು ಇರಲಿಲ್ಲ. ಹೀಗಾಗಿ ಹಿಜಾಬ್ ವಿಚಾರ ದೊಡ್ಡದು ಮಾಡಿದ್ದಾರೆ ಎಂದರು.
PublicNext
11/02/2022 05:06 pm