ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಸ್ವಾವಲಂಬಿ ಭಾರತ'ಕ್ಕಾಗಿ ಎನ್ಇಪಿ ಜಾರಿಯಾಗಿದೆ: ಯೋಗಿ ಆದಿತ್ಯ ನಾಥ್

ಕಾನ್ಪುರ: 'ಸ್ವಾವಲಂಬಿ ಭಾರತ'ದ ಪರಿಕಲ್ಪನೆಯ ಸಾಕಾರಕ್ಕಾಗಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಲಾಗಿದೆ. ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಕಾನ್ಪುರ ಐಐಟಿಯ 54ನೇ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿರುವ ಯೋಗಿ, 2020ರಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದೆ. ಸ್ವಾವಲಂಬಿ ಭಾರತದ ಕನಸು ನನಸು ಮಾಡುವುದೇ ಈ ನೀತಿಯ ಉದ್ದೇಶವಾಗಿದೆ. ರಾಜ್ಯದ ಯುವಜನರಿಗಾಗಿ ಹೊಸ ದಾರಿ ತೋರುವ ಕಾನ್ಪುರ ಐಐಟಿ, ಬನಾರಸ್ ಹಿಂದೂ ವಿಶ್ವವಿದ್ಯಾಲಯ –ಐಐಟಿ, ಲಖನೌ ಐಐಟಿಯನ್ನು ಹೊಂದಿರುವುದು ನಮ್ಮ ಸುಯೋಗ ಎಂದು ಬಣ್ಣಿಸಿದ ಆದಿತ್ಯನಾಥ್, ರಕ್ಷಣಾ ಉತ್ಪಾದನೆ ವಿಚಾರದಲ್ಲಿ ತಾಂತ್ರಿಕ ಸಹಭಾಗಿತ್ವದ ಪಾತ್ರವನ್ನು ಐಐಟಿ ಕಾನ್ಪುರ ನಿಭಾಯಿಸುತ್ತಿದೆ' ಎಂದಿದ್ದಾರೆ.

Edited By : Nagaraj Tulugeri
PublicNext

PublicNext

28/12/2021 08:34 pm

Cinque Terre

33.2 K

Cinque Terre

1

ಸಂಬಂಧಿತ ಸುದ್ದಿ