ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಪ್ಪಳ: ಸರ್ಕಾರಿ ಶಾಲೆಯಲ್ಲಿ ಮೊಟ್ಟೆ ವಿತರಣೆ: ಇದನ್ನ ವಿರೋಧಿಸಿ ಶಾಲೆಯನ್ನೆ ಬಿಡಿಸಿದ ತಂದೆ

ಕೊಪ್ಪಳ: ಸರ್ಕಾರಿ ಶಾಲೆಯಲ್ಲಿ ಮೊಟ್ಟೆ ನೀಡಿತ್ತಿರೊ ಹಿನ್ನೆಲೆಯಲ್ಲಿಯೇ ತಂದೆಯೊಬ್ಬರು ತಮ್ಮ ಮಗನ ಟಿಸಿಯನ್ನ ಪಡೆದು ಖಾಸಗಿ ಶಾಲೆಗೆ ಸೇರಿಸಿರೋ ಘಟನೆ ಕೊಪ್ಪಳದ ರೈಲ್ವೆ ನಿಲ್ದಾಣದ ಬಳಿ ಇರೋ ಸರ್ಕಾರಿ ಶಾಲೆಯಲ್ಲಿ ನಡೆದಿದೆ.

ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ಹುಡುಗನ ಹೆಸರು ಶರಣಬಸವಕಿರಣ. ತಂದೆ ವೀರಣ್ಣ. ಇವರು ಅಖಿಲ ಭಾರತ ಲಿಂಗಾಯತ್ ಮಹಾಸಭಾದ ರಾಜ್ಯಾಧ್ಯಕ್ಷರು.

ಸರ್ಕಾರಿ ಶಾಲೆಯಲ್ಲಿ ಮೊಟ್ಟೆ ನೀಡುವುದು ನನ್ನ ಧರ್ಮಕ್ಕೆ ವಿರುದ್ಧವಾಗಿದೆ. ನನ್ನ ಮಗ ಒಂದೆರಡು ದಿನ ಮೊಟ್ಟ ತಿನ್ನದೇ ಇರಬಹುದು. ಆದರೆ ಅವರನ್ನ ನೋಡಿ ತಿನ್ನಲೂ ಆರಂಭಿಸಬಹುದು ಎಂದು ತಂದೆ ವೀರಣ್ಣ ಹೇಳಿದ್ದಾರೆ.

ಈ ಕಾರಣಕ್ಕೆ ಸರ್ಕಾರಿ ಶಾಲೆಯಿಂದ ಟಿಸಿ ಪಡೆದಿದ್ದೇನೆ. ಖಾಸಗಿ ಶಾಲೆಗೂ ಸೇರಿಸಿದ್ದೇನೆ ಎಂದು ಸಾಮಾಜಿಕ ತಾಣದಲ್ಲೂ ಈ ವಿಷಯವನ್ನ ವೀರಣ್ಣ ಹಂಚಿಕೊಂಡಿದ್ದಾರೆ.

Edited By : Manjunath H D
PublicNext

PublicNext

19/12/2021 11:13 am

Cinque Terre

81.99 K

Cinque Terre

43

ಸಂಬಂಧಿತ ಸುದ್ದಿ