ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಿಯು ಬೋರ್ಡ್ ವಿರುದ್ಧ ಧರಣಿ ಗಿಳಿದ ವಿದ್ಯಾರ್ಥಿ ಸಂಘಟನೆ

ವರದಿ - ಗಣೇಶ್ ಹೆಗಡೆ

ಬೆಂಗಳೂರು: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಅರ್ಧ ವಾರ್ಷಿಕ ಪರೀಕ್ಷೆಯನ್ನು ವಾರ್ಷಿಕ ಪರೀಕ್ಷೆ ಮಾದರಿಯಲ್ಲಿ ನಡೆಸಲು ಹೊರಟಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ ಕ್ರಮವನ್ನು ವಿರೋಧಿಸಿ, ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ ನಗರದಲ್ಲಿ ಪ್ರತಿಭಟನೆ ನಡೆಸಿತು.

ಮೈಸೂರು ಬ್ಯಾಂಕ್ ವೃತ್ತದಲ್ಲಿ ಪಿಯು ಕಾಲೇಜು ವಿದ್ಯಾರ್ಥಿಗಳು ಧರಣಿ ನಡೆಸಿದರು.

ಪಿಯು ಬೋರ್ಡ್ ಗೆ ಧಿಕ್ಕಾರ ಕೂಗಿದ ವಿದ್ಯಾರ್ಥಿಗಳು ಪದವಿ ಪೂರ್ವ ಶಿಕ್ಷಣ ಇಲಾಖೆ ಅರ್ಧ ವಾರ್ಷಿಕ ಕೇಂದ್ರೀಕೃತ ಮಾದರಿಯಲ್ಲಿ ನಡೆಸುವ ನಿರ್ಧಾರ ಕೈಬಿಡಬೇಕು ಎಂದು ಆಗ್ರಹಿಸಿದರು.

ಈ ಮೊದಲ ಇದ್ದಂತೆಯೇ ಆಯಾ ಕಾಲೇಜು ಹಂತದಲ್ಲಿ ವಿಕೇಂದ್ರೀಕೃತ ಮಾದರಿಯಲ್ಲಿ‌ ಪರೀಕ್ಷೆ ಹಾಗೂ‌ ಮೌಲ್ಯ ಮಾಪನಕ್ಕೆ ಅವಕಾಶ ನೀಡಬೇಕೆಂದು ವಿದ್ಯಾರ್ಥಿ ಸಂಘಟನೆ ಒತ್ತಾಯಿಸಿದೆ.

Edited By : Shivu K
PublicNext

PublicNext

17/11/2021 01:25 pm

Cinque Terre

87.89 K

Cinque Terre

2

ಸಂಬಂಧಿತ ಸುದ್ದಿ