ದಾವಣಗೆರೆ: ಸಂಸಾರ ನೋಡಿಕೊಳ್ಳಲು ನಾವು ಶಿಕ್ಷಕರನ್ನು ನೇಮಕ ಮಾಡಿಲ್ಲ. ಬದಲಾಗಿ ಮಕ್ಕಳಿಗೆ ಪಾಠ ಮಾಡಲು ನೇಮಕ ಮಾಡಿದ್ದೇವೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.
ದಾವಣಗೆರೆ ಜಿಲ್ಲೆಯ ಬೆಳಲಗೇರೆ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೂರು ವರ್ಷದಿಂದ ವರ್ಗಾವಣೆ ಪ್ರಕ್ರಿಯೆ ನಿಂತಿತ್ತು. ಎರಡು ದಿನದಿಂದ ಮತ್ತೆ ಶುರುವಾಗಿದೆ. ಎಲ್ಲ ಶಿಕ್ಷಕರು ಸಂತೋಷ ವ್ಯಕ್ತಪಡಿಸಿದ್ದಾರೆ. ಕೆಲ ವೈಯಕ್ತಿಕ ಸಮಸ್ಯೆಗಳನ್ನು ಸಾಮೂಹಿಕ ಎಂದು ಬಿಂಬಿಸಲಾಗದು. ಕೆಲ ಶಿಕ್ಷಕರಿಗೆ ಸೇರುವಾಗ ಜಿಲ್ಲಾವಾರು ಆಯ್ಕೆ ಅಂತ ಗೊತ್ತಿರಲಿಲ್ಲವೇ? ಆಗ ರಾಯಚೂರು, ಮತ್ತೊಂದು ಜಿಲ್ಲೆ ದೂರ ಅಂತಾ ಗೊತ್ತಿರಲಿಲ್ವಾ? ವರ್ಗಾವಣೆ ಪ್ರಕ್ರಿಯೆ ಲೇಟ್ ಆಗಿಲ್ಲ. ನಾವು ಶಿಕ್ಷಕರನ್ನು ನೇಮಕ ಮಾಡಿರುವುದು ಪಾಠ ಮಾಡಲಿಕ್ಕೆ. ಸಂಸಾರ ನೋಡಿಕೊಳ್ಳುವುದಕ್ಕಲ್ಲ ಎಂದು ಬಿ.ಸಿ ನಾಗೇಶ್ ಕಿಡಿ ಕಾರಿದ್ದಾರೆ.
ಎಲ್ಲರ ಸಮಸ್ಯೆನೂ ಅರ್ಥ ಆಗುತ್ತೆ. ಆದ್ರೆ ಶಿಕ್ಷಕರ ಸಮಸ್ಯೆಗಿಂತ ಮೊದಲು ಮಕ್ಕಳ ಸಮಸ್ಯೆ ಬಗೆಹರಿಸಬೇಕಿದೆ. ಬಳಿಕ ಜಿಲ್ಲಾವಾರು ಶಿಕ್ಷಕರ ಸಮಸ್ಯೆ ಬಗೆಹರಿಸುತ್ತೇವೆ. ಸದ್ಯದರಲ್ಲಿ ಸಿಇಟಿ ಕರೆದಿದ್ದೇವೆ. ಐದು ಸಾವಿರ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳುತ್ತೇವೆ ಎಂದು ಬಿ.ಸಿ ನಾಗೇಶ್ ತಿಳಿಸಿದ್ದಾರೆ.
PublicNext
28/10/2021 07:18 pm