ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿದ್ಯಾವಂತ ಜನರೇ ಇಂದು ಹೆಚ್ಚು ಭಯೋತ್ಪಾದನೆಯಲ್ಲಿ ತೊಡಗಿದ್ದಾರೆ; ಮೋದಿ ವಿಷಾದ

ನವದೆಹಲಿ: ವಿಶ್ವದಲ್ಲಿ ಇಂದು ಹಿಂಸಾಚಾರ ಮತ್ತು ಭಯೋತ್ಪಾದನೆ ಹೆಚ್ಚುತ್ತಿದೆ. ಆದರೆ, ಈ ಎರಡನ್ನೂ ಹರಡುತ್ತಿರುವುದು ಹೆಚ್ಚು ವಿದ್ಯಾವಂತ ಮತ್ತು ಪರಿಣತ ಜನರೇ ಆಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಷಾದ ವ್ಯಕ್ತಪಡಿಸಿದ್ದಾರೆ.

ದೇಶದ ಅತ್ಯಂತ ಹಳೆಯ ವಿಶ್ವವಿದ್ಯಾಲಯವಾದ ವಿಶ್ವ ಭಾರತಿ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಿ ಮಾತನಾಡಿದ ಅವರು, ವಿಶ್ವದಲ್ಲಿ ಭಯೋತ್ಪಾದನೆ ಹಾಗೂ ಗಲಭೆ ಎಬ್ಬಿಸುತ್ತಿರುವವರಲ್ಲಿ ಬಹುತೇಕರು ಸುಶಿಕ್ಷಿತರೇ ಆಗಿದ್ದಾರೆ. ಇನ್ನೊಂದೆಡೆ ಕೊರೊನಾ ಸಮಯದಲ್ಲಿ ಜನರನ್ನು ಕಾಪಾಡಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟವರು ಸಹ ಇದ್ದಾರೆ. ಇದು ಸಿದ್ಧಾಂತವಲ್ಲ, ಅವರ ಮನಸ್ಥಿತಿಯಾಗಿದೆ ಎಂದು ತಿಳಿಸಿದ್ದಾರೆ.

ಶಿಕ್ಷಣದ ಮೂಲಕ ಉಗ್ರವಾದವನ್ನು ಹತ್ತಿಕ್ಕಬಹುದು ಎಂದು ನಾಗರಿಕ ಸಮಾಜ ಹೇಳುತ್ತಿದ್ದರೆ, ಇನ್ನೊಂದೆಡೆ ಜಸ್ಟ್ ಸೆಕ್ಯುರಿಟಿಯ ವರದಿ ಪ್ರಕಾರ ಭಯೋತ್ಪಾದಕರಲ್ಲಿ ಬಹುತೇಕರು ಸುಶಿಕ್ಷತರೇ ಆಗಿದ್ದಾರೆ ಎಂದು ಹೇಳಲಾಗಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿಯವರು ಸಹ ಇದನ್ನೇ ಉಚ್ಚರಿಸಿದ್ದು, ಭಯೋತ್ಪಾದಕರ ಪೈಕಿ ಬಹುತೇಕರು ಶಿಕ್ಷಿತರು ಎಂದು ಹೇಳಿದ್ದಾರೆ.

ಪದವಿ ಪ್ರಧಾನ ಮಾಡುವ ವೇಳೆ ವಿಶ್ವಭಾರತಿಯ ಸ್ಪೂರ್ತಿದಾಯಕ ಪರಂಪರೆಯನ್ನು ಶ್ಲಾಘಿಸಿದ ಪ್ರಧಾನಿ, "ಹಳ್ಳಿಗಳಲ್ಲಿನ ರೈತರು ಮತ್ತು ಕುಶಲಕರ್ಮಿಗಳಿಗೆ ತಮ್ಮ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಗಳನ್ನು ಹುಡುಕಲು ಸಹಾಯ ಮಾಡುವಂತೆ ನಾನು ವಿದ್ಯಾರ್ಥಿಗಳನ್ನು ಕೇಳಿಕೊಳ್ಳುತ್ತೇನೆ. ಅದು 'ಆತ್ಮನಿರ್ಭರ್' (ಸ್ವಾವಲಂಬಿ) ಭಾರತ ನಿರ್ಮಾಣದ ಒಂದು ಹೆಜ್ಜೆಯಾಗಿದೆ" ಎಂದು ತಿಳಿಸಿದರು. "ಜ್ಞಾನದೊಂದಿಗೆ ಜವಾಬ್ದಾರಿ ಬರುತ್ತದೆ ಮತ್ತು ಅವರು ಪಡೆದ ಜ್ಞಾನವು ಅವರದಲ್ಲ, ಅದು ಭವಿಷ್ಯದ ಪೀಳಿಗೆಗೆ ಒಂದು ದಾರಿಯಾಗಿದೆ. ನಿಮ್ಮ ಜ್ಞಾನ ಮತ್ತು ಕೌಶಲ್ಯವು ಸಮಾಜವನ್ನು ಹೆಮ್ಮೆಪಡುವಂತೆ ಮಾಡುತ್ತದೆ. ಆದರೆ ಅದು ವಿನಾಶದ ಕತ್ತಲೆಯೊಳಗೆ ತಳ್ಳಲೂ ಸಾಧ್ಯತೆ ಇರುತ್ತದೆ. ಇತಿಹಾಸದಲ್ಲಿ ಮತ್ತು ವರ್ತಮಾನದಲ್ಲಿ ಇಂತಹ ಅನೇಕ ಉದಾಹರಣೆಗಳಿವೆ" ಎಂದಿದ್ದಾರೆ.

Edited By : Nirmala Aralikatti
PublicNext

PublicNext

19/02/2021 09:57 pm

Cinque Terre

99.55 K

Cinque Terre

4

ಸಂಬಂಧಿತ ಸುದ್ದಿ