ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರೇಕಿಂಗ್: ಫೆ.1ರಿಂದ 9ನೇ ತರಗತಿ, ಪ್ರಥಮ ಪಿಯು ಕ್ಲಾಸ್ ಶುರು

ಬೆಂಗಳೂರು: ರಾಜ್ಯಾದಂತ್ಯ 9ನೇ ಹಾಗೂ ಪ್ರಥಮ ಪದವಿ ಪೂರ್ವ ತರಗತಿ ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿವೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಕೆ ಸುಧಾಕರ್ ಅವರು ಎರಡೂ ಇಲಾಖೆ ಹಿರಿಯ ಅಧಿಕಾರಿಗಳು, ತಾಂತ್ರಿಕ ಸಲಹಾ ಸಮಿತಿ ಸದಸ್ಯರ ಜೊತೆ ಉನ್ನತ ಮಟ್ಟದ ಸಭೆ ನಡೆಸಿದರು. ಬಳಿಕ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸುರೇಶ್‌ ಕುಮಾರ್‌ ಅವರು, ರಾಜ್ಯದಲ್ಲಿ ಈಗಾಗಲೇ 10ನೇ ತರಗತಿ ಹಾಗೂ ದ್ವಿತೀಯ ಪದವಿ ಪೂರ್ವ ತರಗತಿಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾಗಿವೆ. ಅದರಂತೆ 9ನೇ ತರಗತಿ ಹಾಗೂ ಪ್ರಥಮ ಪದವಿ ಪೂರ್ವ ತರಗತಿಗಳು ನಡೆಯಲಿದ್ದು, ಹಾಜರಾತಿ ಕಡ್ಡಾಯವಲ್ಲ. 6ರಿಂದ ಎಂಟನೇ ತರಗತಿಯವರೆಗೆ ವಿದ್ಯಾಗಮ ತರಗತಿಗಳು ಮುಂದುವರಿಯಲಿದೆ. ಜೊತೆಗೆ 1ರಿಂದ 5ನೇ ತರಗತಿ ಆರಂಭಿಸುವ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ತಿಳಿಸಿದರು.

ಎಸ್ಎಸ್ಎಲ್ ಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನೂ ಇದೇ ವೇಳೆಗೆ ಬಿಡುಗಡೆ ಮಾಡಲಾಯಿತು. 2020-21ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆ ಜೂ.14ರಿಂದ ಜೂ.25ರವರೆಗೆ ನಡೆಯಲಿದೆ.

Edited By : Vijay Kumar
PublicNext

PublicNext

28/01/2021 04:22 pm

Cinque Terre

82.62 K

Cinque Terre

7

ಸಂಬಂಧಿತ ಸುದ್ದಿ