ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಸಿಎಂಗೆ ಎಚ್ಚರಿಕೆ ಕೊಟ್ಟ ಕನಕ ಗುರುಪೀಠದ ಶ್ರೀ!

ದಾವಣಗೆರೆ: ರಾಜ್ಯದಲ್ಲಿ ಪಠ್ಯಕ್ರಮ ಪರಿಷ್ಕರಣೆ ವಿಚಾರ ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ. ಈಗ ಆಗಿರುವ ಲೋಪದೋಷ ಸರಿಪಡಿಸಿ. ಇದೇ ರೀತಿಯ ಉದ್ಧಟತನ ಹಾಗೂ ಕಾರ್ಯವೈಖರಿ ಮುಂದುವರಿದರೆ ಮುಂಬರುವ ದಿನಗಳಲ್ಲಿ ಬಹಳ ಕಷ್ಟ ಅನುಭವಿಸಬೇಕಾಗುತ್ತದೆ ಎಂದು ಬೆಳ್ಳೂಡಿಯ ಕಾಗಿನೆಲೆ ಮಠದ ಪೀಠಾಧಿಪತಿ ನಿರಂಜನಾನಂದಪುರಿ ಮಹಾಸ್ವಾಮೀಜಿ ಎಚ್ಚರಿಕೆ ನೀಡಿದರು.

ಹರಿಹರದ ಬೆಳ್ಳೂಡಿಯ ಕನಕ ಪೀಠದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಿಎಂ ಬಸವರಾಜ ಬೊಮ್ಮಾಯಿ, ಶಿಕ್ಷಣ ಸಚಿವರು ಉದ್ಧಟತನ ಬಿಟ್ಟು ಗೊಂದಲ ಪರಿಹರಿಸಬೇಕು. ಆಗಿರುವ ಪ್ರಮಾದ ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಯಾವುದೇ ಒಂದು ಜಾತಿಗೆ ಶಿಕ್ಷಣ ಸೀಮಿತ ಮಾಡಬಾರದು. ಕುವೆಂಪು, ಜಗಜ್ಯೋತಿ ಬಸವಣ್ಣ, ಕನಕದಾಸರು ಸೇರಿದಂತೆ ಮಹಾನ್ ಮಾನವತವಾದಿಗಳ ಸತ್ಯವಾದ ಜೀವನ ಚರಿತ್ರೆಯನ್ನು ಸಮುದಾಯಕ್ಕೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಪಠ್ಯದಲ್ಲಿ ಕೆಲವೊಂದು ಅಂಶಗಳನ್ನು ಮುಚ್ಚಿಟ್ಟು ಇಲ್ಲಸಲ್ಲದ ಅಂಶಗಳನ್ನು ಸೇರಿಸಲು ಮುಂದಾದರೆ ಸಹಿಸಲು ಸಾಧ್ಯವಿಲ್ಲ. ಇಂಥ ಕೆಲಸ ಅಕ್ಷಮ್ಯ ಅಪರಾಧ. ಲೋಪದೋಷಗಳನ್ನು ಆದಷ್ಟು ಬೇಗ ಸರಿಪಡಿಸಿಕೊಳ್ಳುತ್ತೀರಾ ಎಂಬ ವಿಶ್ವಾಸ ಇದೆ. ಇಲ್ಲದಿದ್ದರೆ ನಾವು ಎಲ್ಲರ ಜೊತೆಗೂಡಿ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದರು.

Edited By : Manjunath H D
PublicNext

PublicNext

25/06/2022 04:33 pm

Cinque Terre

78.3 K

Cinque Terre

8