ಹಾಸನ: ಹಾಸನ ಜಿಲ್ಲೆಯಲ್ಲಿ ಹಿಜಾಬ್ ರಗಳೆ ಮುಗಿಯದ ಕತೆ ಎನ್ನುವಂತಾಗಿದೆ. ಅರಸೀಕೆರೆ ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಇವತ್ತು ಕೂಡ ವಿದ್ಯಾರ್ಥಿನಿಯರು ಪ್ರತಿಭಟನೆ ಮುಂದುವರೆಸಿದ್ದಾರೆ. ನಮಗೆ ಹಿಜಾಬ್ ಧರಿಸಲು ಅವಕಾಶ ಕೊಡಿ ಇಲ್ಲವಾದ್ರೆ ಟಿಸಿ ಕೊಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೂ ಅಂಗಳದಲ್ಲೇ ಕುಳಿತು ಅಧ್ಯಯನ ಮಾಡಲಾರಂಭಿಸಿದ್ದಾರೆ.
ಸುಮಾರು ಹೊತ್ತು ಅಂಗಳದಲ್ಲೇ ಕುಳಿತು ಅಧ್ಯಯನ ಮಾಡಿದ ವಿದ್ಯಾರ್ಥಿನಿಯರು ನಂತರ ಮನೆಗೆ ತೆರಳಿದ್ದಾರೆ. ನಿನ್ನೆ ಕೂಡ ವಿದ್ಯಾರ್ಥಿನಿಯರು ಕಾಲೇಜಿನ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದರು.
PublicNext
19/02/2022 06:02 pm