ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಹಿಜಾಬ್ ಆಯ್ತು ಕೇಸರಿ ಆಯ್ತು ಈಗ ನೀಲಿ ಶಾಲು ಸರದಿ !

ಚಿಕ್ಕಮಗಳೂರು: ಹಿಜಾಬ್ ವಿವಾದ ದಿನೇ ದಿನೇ ತಾರಕಕ್ಕೇರುತ್ತಿದೆ.ಹಿಜಾಬ್ ವಿಚಾರದಿಂದ ಕೇಸರಿ ಶಾಲು ಹೊರ ಬಂದವು. ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜ್‌ಗೆ ಬಂದೇ ಬಿಟ್ಟರು. ಆದರೆ ಈಗ ನೀಲಿ ಶಾಲಿನ ಸರದಿ ಬಂದು ಬಿಟ್ಟಿದೆ. ವಿದ್ಯಾರ್ಥಿಗಳು ನೀಲಿ ಶಾಲು ಧರಿಸಿ ಕಾಲೇಜ್‌ ಗೆ ಕಾಲಿಟ್ಟಿದ್ದಾರೆ.

ಚಿಕ್ಕಮಗಳೂರಿನ ಐಡಿಎಸ್‌ಜಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ನೀಲಿ ಶಾಲು ಧರಿಸಿ ಪ್ರತಿಭಟನೆ ಮಾಡಿದ್ದಾರೆ. ಜೈ ಭೀಮ್ ಘೋಷಣೆ ಕೂಗುತ್ತಲೇ ಹಿಜಾಬ್ ತೆಗೆಸಬಾರದು ಎಂದು ಪ್ರತಿಭಟನೆ ಮಾಡಿದ್ದಾರೆ.

ಆದರೆ ಈ ನೀಲಿ ಶಾಲು ಧರಿಸಿದ ವಿದ್ಯಾರ್ಥಿಗಳ ನಡೆ ವಿರುದ್ಧ ಕೇಸರಿ ಶಾಲು ಧರಿಸಿದ ಯುವಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೈ ಶ್ರೀರಾಮ್ ಎಂದು ಘೋಷಣೆ ಕೂಡ ಸಿಟ್ಟು ಹೊರ ಹಾಕಿದ್ದಾರೆ.

Edited By : Manjunath H D
PublicNext

PublicNext

07/02/2022 01:39 pm

Cinque Terre

75.07 K

Cinque Terre

33