ಬೆಂಗಳೂರು: ಹಿಜಾಬ್ ಮೊದಲಿನಿಂದಲೂ ಹಾಕ್ತಿದ್ರು, ಕೇಸರಿ ಶಾಲು ಮೊದಲಿನಿಂದ ಹಾಕ್ತಿದ್ರಾ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 'ಕುಂದಾಪುರ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಗೇಟ್ ಹಾಕುವ ಮೂಲಕ ಮುಸ್ಲಿಂ ಹೆಣ್ಣು ಮಕ್ಕಳನ್ನ ಕಾಲೇಜಿಗೆ ತಡೆದಿದ್ದಾರೆ. ಕೇಸರಿ ಶಾಲು ಹಾಕಿ ಬಿಜೆಪಿ ಬೇಕೆಂದೇ ಮಾಡಿದೆ. ವಿಷಯಾಂತರ ಮಾಡೋಕೆ ಈ ರೀತಿ ಮಾಡಿದ್ದಾರೆ. ಸ್ಕಾರ್ಫ್ ಹಾಕುವುದು ಅವರ ಧಾರ್ಮಿಕ ನಿಯಮ, ಅದು ಎಷ್ಟೋ ವರ್ಷಗಳಿಂದ ನಡೆಯುತ್ತಾ ಬರುತ್ತಿದೆ. ಈಗ ಯಾಕೆ ವಿರೋಧ ಮಾಡುತ್ತಿದ್ದಾರೆ. ಇದು ಹೆಣ್ಣು ಮಕ್ಕಳಿಗೆ ವಿದ್ಯೆಯಿಂದ ವಂಚಿತರನ್ನಾಗಿಸುವ ಹುನ್ನಾರ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಸರಿ ಶಾಲು ಹಾಕೋದು ನಿನ್ನೆ, ಮೊನ್ನೆಯಿಂದ ಬಂದಿರೋದು. ಹಿಜಾಬ್ ಹಿಂದಿನಿಂದಲೂ ಇದೆ. ಸಂಘ ಪರಿವಾರದ ಪ್ರಯೋಗಾಲಯ ಕರಾವಳಿ ಪ್ರದೇಶ. ಚುನಾವಣೆ ಹತ್ತಿರ ಬಂದಾಗ ಇಂತಹ ವಿಷಯಗಳನ್ನು ಮುನ್ನಲೆ ತರಲಾಗುತ್ತದೆ. ಕೊರ್ಟ್‌ನ ಡಿಸಿಷನ್ ನೋಡಿಕೊಂಡು ನಾವು ಅಸೆಂಬ್ಲಿಯಲ್ಲಿ ಈ ವಿಷಯವನ್ನು ಪ್ರಸ್ತಾಪ ಮಾಡುತ್ತೇವೆ ಎಂದು ತಿಳಿಸಿದರು.
PublicNext
04/02/2022 03:52 pm