ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು : ಬಿಜೆಪಿ ಅಧಿಕಾರಕ್ಕೆ ಬರುವ ಮೊದಲಿನಿಂದಲೂ ಗಣೇಶೋತ್ಸವ ಆಚರಣೆಯಲ್ಲಿದೆ: ಸಚಿವ ಬಿ.ಸಿ ನಾಗೇಶ್

ತಿಪಟೂರು: ಹೊಸದಾಗಿ ಶಾಲೆಗಳಲ್ಲಿ ನಮಾಜ್ ಮಾಡಬೇಕು ಎಂಬ ಹಕ್ಕನ್ನು ಸರ್ಕಾರ ಕೊಟ್ಟಿಲ್ಲ. ಆದ್ರೆ ಗಣೇಶೋತ್ಸವ ಸಂಪ್ರದಾಯ ಈ ನೆಲದಲ್ಲಿ ಬೆಳೆದು ಬಂದಿತ್ತೋ ಅವೆಲ್ಲವೂ ಪದ್ಧತಿ ಪ್ರಕಾರ ನಡೆಯುತ್ತದೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದರು.

ತಿಪಟೂರಿನಲ್ಲಿ ಮಾತನಾಡಿ, ಗಣೇಶೋತ್ಸವ ಭಾರತೀಯ ಹಬ್ಬ, ಅದನ್ನು ಶಾಲಾ ಕಾಲೇಜುಗಳಲ್ಲಿ ಆಚರಿಸಲು ಯಾವುದೇ ಆದೇಶ ಹೊರಡಿಸಿಲ್ಲ,ಆದರೆ ವಿದ್ಯಾಧಿಪತಿ ಗಣಪತಿಯನ್ನು ಎಲ್ಲಡೆಯೂ ಪೂಜಿಸಲಾಗುತ್ತದೆ. ಇದು ನಮ್ಮ ಸಂಸ್ಕೃತಿಯಲ್ಲೇ ಬಂದಿದೆ ಎಂದರು.

ಗಣಪತಿ ಉತ್ಸವಗಳು ಮನೆಗಳಲ್ಲಿ ನಡೆಯುತ್ತಿದ್ದವು. ಆದರೆ ಬಾಲಗಂಗಾಧರ ತಿಲಕ್ ಭಾರತೀಯ ರನ್ನು ಒಗ್ಗೂಡಿಸಿ ಕೊಳ್ಳಲು ಈ ಗಣಪತಿ ಉತ್ಸವವಗಳನ್ನು ಸ್ವಾತಂತ್ರ್ಯ ಚಳವಳಿಯಲ್ಲಿ ಹೋರಾಟದ ಅಸ್ತ್ರವಾಗಿ ರೂಪಿಸಿದ್ದರು. ಈ ಮೂಲಕ ಜನರನ್ನು ಸ್ವಾತಂತ್ರ್ಯ ಪಡೆಯಲು ಉತ್ತೇಜಿಸಿದ್ದರು. ಈ ಸಂಪ್ರದಾಯ ಶಾಲಾ ಕಾಲೇಜು, ಹಾಸ್ಟೆಲ್‌ಗಳಲ್ಲಿ ನಡೆದುಕೊಂಡು ಬಂದಿದೆ ಎಂದರು.

ಈ ಹಬ್ಬಕ್ಕೆ ಇದಕ್ಕೆ ಯಾವುದೇ ಆದೇಶ ಹೊರಡಿಸಿಲ್ಲ. ಯಾವ ಸಂಪ್ರದಾಯ ಈ ನೆಲದಲ್ಲಿ ಬೆಳೆದು ಬಂದಿತ್ತೋ ಅವೆಲ್ಲವೂ ಪದ್ಧತಿ ಪ್ರಕಾರ ನಡೆಯುತ್ತದೆ. ನಮ್ಮ ಸರ್ಕಾರ ಬರುವುದಕ್ಕೂ ಮೊದಲಿನಿಂದಲೂ ಇದು ಹಾಸುಹೊಕ್ಕಾಗಿದೆ ಎಂದು ಹೇಳಿದರು.

Edited By :
PublicNext

PublicNext

18/08/2022 09:33 pm

Cinque Terre

128.41 K

Cinque Terre

5

ಸಂಬಂಧಿತ ಸುದ್ದಿ