ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪಠ್ಯಪುಸ್ತಕಗಳು ಮರು ಮುದ್ರಣವಾದ್ರೆ ಶಿಕ್ಷಣ‌ ಇಲಾಖೆಗೆ ಕೋಟಿ-ಕೋಟಿ ಲಾಸ್

ಬೆಂಗಳೂರು: ಆರರಿಂದ ಹತ್ತನೇ ತರಗತಿಯವರೆಗೆ ಸಮಾಜ ವಿಜ್ಞಾನ ಭಾಷಾ ಪಠ್ಯಗಳು ಸೇರಿದಂತೆ ಇನ್ನಿತರ ವಿಷಯಗಳ ಪಠ್ಯ ಪುಸ್ತಕ ಪರಿಷ್ಕರಣೆ ವಿವಾದಕ್ಕೀಡಾಗಿರುವ ಬೆನ್ನಲ್ಲೇ ತಪ್ಪುಗಳನ್ನು ಸರಿಪಡಿಸಿ ಮರು ಮುದ್ರಣ ಮಾಡುವುದಾಗಿ ಸರ್ಕಾರ ಹೇಳುತ್ತಿದೆ. ಇದರಿಂದ ಶಿಕ್ಷಣ ಇಲಾಖೆಗೆ ಕೋಟಿ‌- ಕೋಟಿ ನಷ್ಟ ಉಂಟಾಗಲಿದೆ.

ಹೌದು.ಶಾಲಾ ಮಕ್ಕಳಿಗೆ ಉಚಿತ ಬೈಸಿಕಲ್ ,ಮೊಟ್ಟೆ ನೀಡಲು ಶಿಕ್ಷಣ ಇಲಾಖೆಯಲ್ಲಿ ಹಣವಿಲ್ಲ. ಆರ್ಥಿಕ ನಷ್ಟದಲ್ಲಿರುವ ಇಲಾಖೆಗೆ ಪಠ್ಯ ಪುಸ್ತಕಗಳು‌ ಮರು ಮುದ್ರಣವಾದ್ರೆ ಬರೋಬ್ಬರಿ 158.21 ಕೋಟಿ ರೂ. ನಷ್ಟವಾಗಲಿದೆ. ಇದರ ನೇರ ಹೊಣೆಯನ್ನು ಸರ್ಕಾರ ಅಥವಾ ರೋಹಿತ್ ಚಕ್ರತೀರ್ಥ ಸಮಿತಿಯೇ ಹೊರಬೇಕಾಗುತ್ತದೆ.

ಪಠ್ಯ ಪರಿಷ್ಕರಣೆ ಹಾಗೂ‌ ಮರು ಪರಿಷ್ಕರಣೆ ಕ್ರಮವಾಗಿದ್ದರೇ ಇದರ ಪ್ರಮೇಯವೇ ಬರ್ತಿಲ್ಲ. ಆದರೆ ಇದೀಗ್ ಪಬ್ಲಿಕ್ ಡೊಮೇನ್ ಪಠ್ಯ ಪರಿಷ್ಕರಣೆ ಬಗ್ಗೆ ಅಭಿಪ್ರಾಯ ಮಂಡಿಸಲು ಸರ್ಕಾರ ಮುಂದಾಗಿರುವ ಹಿನ್ನೆಲೆಯಲ್ಲಿ ಪೋಷಕರು, ಶಿಕ್ಷಣ ತಜ್ಞರು, ಮರು ಪರಿಷ್ಕರಣೆ ಪಟ್ಟು ಹಿಡಿದ್ರೆ ಶಿಕ್ಷಣ ಇಲಾಖೆಗೆ 158.21 ಕೋಟಿ ಹೆಚ್ಚುವರಿ ಹೊರೆ ಆಗಲಿದೆ.

Edited By :
PublicNext

PublicNext

11/06/2022 08:22 pm

Cinque Terre

62.68 K

Cinque Terre

7

ಸಂಬಂಧಿತ ಸುದ್ದಿ