ಕಲಬುರಗಿ : ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸರ್ಕಾರ ಮರು ಪರೀಕ್ಷೆಗೆ ಅಸ್ತು ಎಂದಿದೆ.
ಇದರಿಂದ ನ್ಯಾಯವಾಗಿ ಓದಿ ಪರೀಕ್ಷೆ ಪಾಸಾದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ನೊಂದ ಅಭ್ಯರ್ಥಿಗಳು ನ್ಯಾಯಾಲಯದ ಮೆಟ್ಟಿಲೇರಲು ಸಜ್ಜಾಗಿದ್ದಾರೆ.
ಇದರ ಮಧ್ಯೆ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಸರ್ಕಾರ ತೆಗೆದುಕೊಂಡ ಮರು ಪರೀಕ್ಷೆಯ ನಿರ್ಧಾರ ಸರಿಯಾಗಿದೆ ಎಂದಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು ಮರು ಪರೀಕ್ಷೆ ನಿರ್ಣಯ ಸೂಕ್ತ ಯಾರು ಪ್ರಾಮಾಣಿಕವಾಗಿ ಬರೆದಿದ್ದಾರೆ ಎಂದು ಗುರುತಿಸುವುದು ಕಷ್ಟ. ಯಾವನು ಮೆರಿಟ್ ಮೇಲೆ ಆಯ್ಕೆಯಾಗಿದ್ದಾನೆ ಅವನು ಯಂತ ಪರೀಕ್ಷೆ ಬಂದರು ಹೆದರುವುದಿಲ್ಲ. ಸುಮ್ಮನೆ ರಸ್ತೆಮೇಲೆ ಹೋರಾಟ ಮಾಡುವುದು ಬಿಡಿ ಮನೆಯಲ್ಲಿ ಕುಳಿತು ಲೈಟ್ ಹಾಕಿ ಕೊಂಡು ಓದಲು ಶುರು ಮಾಡಿ. ನೀವು ಬುದ್ಧಿವಂತರಾಗಿದ್ದರೆ ಎಂಥ ಪರೀಕ್ಷೆ ಆದ್ರೂ ಎದುರಿಸಿ ಗೆಲ್ತಿರಿ. ಇನ್ನೊಮ್ಮೆ ಪರೀಕ್ಷೆ ಆಗಲಿ, ಯಾರು ನಿಜವಾದ ಬುದ್ಧಿವಂತರು ಅವರು ಆಯ್ಕೆ ಆಗಿಯೇ ಆಗುತ್ತಾರೆ ಎಂದಿದ್ದಾರೆ.
ಎಲ್ಲಾ ಪಕ್ಷದಲ್ಲಿಯೂ ಇಂತಹ ಕೆಲಸಕ್ಕೆ ಕೆಲವರು ದಲಾಲರು ಇದ್ದಾರೆ. ಪಿಎಸ್ ಐ ಪರೀಕ್ಷೆ ಮಾತ್ರ ಅಲ್ಲ, ಹಿಂದೆ ನಡೆದ ಬಹುತೇಕ ಎಲ್ಲಾ ಪರೀಕ್ಷೆಗಳೂ ಪಾರದರ್ಶಕವಾಗಿ ಆಗಿಲ್ಲ KPSC ಮೇಂಬರ್ ಆಗಲು ಎಷ್ಟು ಕೋಟಿ ಕೊಡಬೇಕು ಗೊತ್ತಾ ? ಆಸ್ತಿ ಮಾರಿ ಪೋಸ್ಟಿಂಗ್ ತಗೊಳ್ಳೋರು ಮುಂದೆ ಏನ್ ಮಾಡ್ತಾರೆ ಗೊತ್ತಲ್ವಾ ? ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದರಿಂದಲೇ ಮಟಕಾ, ಕ್ಲಬ್ ನಡಿತ್ತಿದ್ದಾವೆ.
ಕಾಶ್ಮೀರದಲ್ಲಿ ಆಲ್ ಪಾರ್ಟಿ ಹುರಿಯತ್ ಕಾನ್ಪರೆನ್ಸ ಇದ್ದಂತೆ ನಮ್ಮ ರಾಜ್ಯದಲ್ಲೂ ಆಲ್ ಪಾರ್ಟಿ ಲಪೂಟರು ಇದ್ದಾರೆ. ಇಂತವರಿಗೆಲ್ಲಾ ತಕ್ಕ ಶಾಸ್ತಿ ಆಗಿ ಪಾರದರ್ಶಕವಾದ ನೇಮಕಾತಿ ನಡೆಯಬೇಕು ಎಂದರು.
PublicNext
02/05/2022 09:01 pm