ಬೆಂಗಳೂರು: ಹಿಜಾಬ್ ವಿವಾದದಲ್ಲಿ ಹೈಕೋರ್ಟ್ ಆದೇಶದ ವಿರುದ್ಧವಾಗಿ ಪರೀಕ್ಷೆ ಬಹಿಷ್ಕರಿಸಿದವರಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶವಿಲ್ಲ ಎಂದು ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ತಿಳಿಸಿದ್ದಾರೆ.
“ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸುವ ಮೊದಲು ನಡೆದ ಮುಖ್ಯ ಪರೀಕ್ಷೆಗಳನ್ನ ತಪ್ಪಿಸಿಕೊಂಡರೆ ಮಾತ್ರ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಗಳಿಗೆ ಅವಕಾಶ ನೀಡಬಹುದು. ಕಾರಣ, ಪರೀಕ್ಷೆ ತಪ್ಪಿಸಿಕೊಂಡಿರುವುದನ್ನು ಮುಗ್ಧತೆ ಅಥವಾ ಅಜ್ಞಾನ ಎಂದು ಪರಿಗಣಿಸಬಹುದು. ಆದರೆ, ಮಧ್ಯಂತರ ಆದೇಶ ಹೊರಬಂದ ನಂತರವೂ ಪರೀಕ್ಷೆಗಳನ್ನ ತಪ್ಪಿಸಿಕೊಂಡ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಗೆ ಅನುಮತಿಸಲಾಗುವುದಿಲ್ಲ. ಯಾಕಂದ್ರೆ, ಅವರು ನ್ಯಾಯಾಲಯದ ಆದೇಶವನ್ನ ಧಿಕ್ಕರಿಸಿದರು” ಎಂದು ಮಾಧುಸ್ವಾಮಿ ಹೇಳಿದರು.
ಪರೀಕ್ಷೆ ತಪ್ಪಿಸಿಕೊಂಡ ಮತ್ತು ಹಿಜಾಬ್ ಇಲ್ಲದೇ ಬರೆಯಲು ಸಿದ್ಧವಾಗಿರುವ ಹುಡುಗಿಯರಿಗೆ ರಾಜ್ಯ ಸರ್ಕಾರ ಮತ್ತೊಂದು ಅವಕಾಶ ನೀಡಬೇಕು ಎಂಬ ಉಡುಪಿ ಶಾಸಕ ರಘುಪತಿ ಭಟ್ ಮನವಿಗೆ ಮಾಧುಸ್ವಾಮಿ ಶೂನ್ಯ ವೇಳೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
PublicNext
17/03/2022 03:59 pm